ಕುಶಾಲನಗರ: ಮೀನು ಹಿಡಿಯಲು ತೆರಳಿದ್ದ ಬಾಲಕರಿಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕುಶಾಲನಗರದ ಕೂಡ್ಲೂರಿನಲ್ಲಿ ನಡೆದಿದೆ.
ಪೃಥ್ವಿ(9), ಪ್ರಜ್ವಲ್(5) ಮೃತಪಟ್ಟ ಬಾಲಕರು ಎಂದು ಹೇಳಲಾಗಿದೆ. ಮನೆಯ ಹಿಂಭಾಗದಲ್ಲಿರುವ ಕಾವೇರಿ ನದಿ ದಂಡೆಯ ಮೇಲೆ ಮೀನು ಹಿಡಿಯುವ ವೇಳೆ ಆಯ ತಪ್ಪಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಅಣ್ಣ ತಮ್ಮಂದಿರಾದ ನಾಗರಾಜ್ ಮತ್ತು ಸತೀಶ್ ಅವರ ಪುತ್ರರಾದ ಪೃಥ್ವಿ ಮತ್ತು ಪ್ರಜ್ವಲ್ ಅವರ ಮೃತದೇಹಗಳನ್ನು ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನೀರಿನಿಂದ ಹೊರ ತೆಗೆದಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.