
ಚಿಕ್ಕಮಗಳೂರು ತಾಲೂಕಿನ ಪವಿತ್ರವನ ಬಳಿಯ ಚುರ್ಚೆಗುಡ್ಡ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾಡ್ಗಿಚ್ಚಿನ ಕೆನ್ನಾಲಿಗೆ ಇಡೀ ಅರಣ್ಯ ಸಂಪತ್ತನೇ ಆಪೋಶನ ಪಡೆಯುತ್ತಿದೆ.
ಬೆಂಕಿಯ ರೌದ್ರಾವತಾರಕ್ಕೆ ನೂರಾರು ಎಕರೆ ಅರಣ್ಯ ಪ್ರದೇಶ ಸಂಪೂರ್ಣ ನಾಶವಾಗಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ತಹಬದಿಗೆ ತರುವುದು ಕಷ್ಟಕರವಾಗಿದೆ.

