HomeInternationalBIG NEWS: ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಬಸ್ - ಕಾರ್; 30 ಮಂದಿ ದುರ್ಮರಣ

BIG NEWS: ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಬಸ್ – ಕಾರ್; 30 ಮಂದಿ ದುರ್ಮರಣ

ಬಸ್ ಹಾಗೂ ಕಾರು ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಪರಿಣಾಮ 30 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ ಜಿಲ್ಲೆಯ ಹೆದ್ದಾರಿಯಲ್ಲಿ ಬಸ್ ಹಾಗೂ ಕಾರು ಡಿಕ್ಕಿಯಾದ ಬಳಿಕ ಕಂದರಕ್ಕೆ ಉರುಳಿ ಬಿದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಪರಿಣಾಮ 30 ಮಂದಿ ಸಾವಿಗೀಡಾಗಿದ್ದು 15 ಮಂದಿ ಗಾಯಗೊಂಡಿದ್ದಾರೆ. ಬಸ್ ಗಿಲ್ಗಿಟ್ ನಿಂದ ರಾವಲ್ಪಿಂಡಿಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular