ಅಮೆರಿಕಾದ ಜಾನ್ಸ್ ಹಾಪ್ ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂಥ್ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿನಿ 13 ವರ್ಷದ ನತಾಶಾ ಪೆರಿಯನಾಯಗಂ ಸತತ ಎರಡನೇ ಬಾರಿಗೆ ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಪರೀಕ್ಷೆಯಲ್ಲಿ 76 ದೇಶಗಳ 15,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದು, ಈ ಪೈಕಿ ಕೇವಲ ಶೇಕಡ 27 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದುಕೊಂಡಿದ್ದರು. ಅಂತಿಮವಾಗಿ ಇವರೆಲ್ಲರನ್ನೂ ಹಿಂದಿಕ್ಕಿ ಮೂಲತಃ ಚೆನ್ನೈನವರಾದ ನತಾಶಾ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ನತಾಶಾ ನ್ಯೂಜೆರ್ಸಿಯ ಫ್ಲ್ಯಾರೆನ್ಸ್ ಗೌಡಿನೀರ್ ಮಿಡಲ್ ಸ್ಕೂಲ್ ನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಿಡುವಿನ ಸಮಯದಲ್ಲಿ ಜೆ ಆರ್ ಆರ್ ಟೋಲ್ಕೀನ್ ಅವರ ಕಾದಂಬರಿಗಳನ್ನು ಓದಲು ಇಷ್ಟಪಡುತ್ತಾರೆ ಎಂದು ಹೇಳಲಾಗಿದೆ.