alex Certify Viral Video: ಭೀಕರ ಭೂಕಂಪದಲ್ಲಿ ಪವಾಡ ಸದೃಶವಾಗಿ ಬದುಕುಳಿದ ನವಜಾತ ಶಿಶು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಭೀಕರ ಭೂಕಂಪದಲ್ಲಿ ಪವಾಡ ಸದೃಶವಾಗಿ ಬದುಕುಳಿದ ನವಜಾತ ಶಿಶು…!

ಸೋಮವಾರದಂದು ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಕಟ್ಟಡಗಳು ಕುಸಿದಿದ್ದು, ಅದರಡಿ ಬಹಳಷ್ಟು ಮಂದಿ ಸಿಲುಕಿರುವ ಭೀತಿ ವ್ಯಕ್ತವಾಗಿದೆ.

ಪರಿಹಾರ ಕಾರ್ಯಾಚರಣೆ ಮುಂದುವರೆದಿರುವ ಮಧ್ಯೆ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಇನ್ನೂ ಹೆಸರಿಡದ ಆಗಷ್ಟೇ ಜನಿಸಿರುವ ನವಜಾತ ಶಿಶುವೊಂದು ಪವಾಡಸದೃಶ್ಯ ರೀತಿಯಲ್ಲಿ ಜೀವಂತವಾಗಿ ಪತ್ತೆಯಾಗಿದೆ.

ದುರದೃಷ್ಟವಶಾತ್ ಈ ಭೂಕಂಪದಲ್ಲಿ ಹೆಣ್ಣು ಶಿಶುವಿನ ತಂದೆ – ತಾಯಿ ಮೃತಪಟ್ಟಿದ್ದು, ಹುಟ್ಟುತ್ತಲೇ ಮಗು ಅನಾಥವಾಗಿದೆ. ಸಿರಿಯಾದ ಆಫ್ರಿನ್ ನಗರದಲ್ಲಿ ಈ ಘಟನೆ ನಡೆದಿದ್ದು ಅವಶೇಷಗಳಡಿ ಜೀವಂತವಾಗಿ ಸಿಲುಕಿದ್ದ ಮಗುವನ್ನು ರಕ್ಷಣಾ ಸಿಬ್ಬಂದಿ ಹೊರ ತರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...