ಬೆಂಗಳೂರು: ನನ್ನಿಂದ ಬ್ರಾಹ್ಮಣರಿಗೆ ಅವಮಾನವಾಗಿಲ್ಲ, ಕ್ಷಮೆ ಕೇಳುವ ತಪ್ಪನ್ನು ನಾನು ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಯಾವುದೇ ಸಮುದಾಯಕ್ಕೆ ಅಗೌರವ ತೋರಿಲ್ಲ, ಹೀಗಾಗಿ ಯಾರ ಕ್ಷಮೆ ಕೇಳುವ ಅಗತ್ಯವಿಲ್ಲ. ನನ್ನಿಂದ ಬ್ರಾಹ್ಮಣರಿಗೆ ಅವಮಾನವಾಗಿಲ್ಲ ಎಂದು ಹೇಳಿದ್ದಾರೆ.
ನಮ್ಮ ರಾಜ್ಯದ ಸೌಹಾರ್ಧತೆಗೆ ಬಿಜೆಪಿಯಿಂದ ಧಕ್ಕೆಯಾಗಿದೆ. ಮತಚಲಾಯಿಸುವ ಮೊದಲು ಆರ್ ಎಸ್ ಎಸ್ ಹುನ್ನಾರಕ್ಕೆ ಮರುಳಾಗಬೇಡಿ. ಶಿವಾಜಿ ಕೊಂದವರು, ಶೃಂಗೇರಿ ಮಠ ಒಡೆದವರ ಕೈಗೆ ಕರ್ನಾಟಕ ಸಿಗಬಾರದು. ಹಾಗಾಗಿ ಎಚ್ಚರದಿಂದ ಇರಿ ಎಂದಿದ್ದೇನೆ ಎಂದು ವಿವರಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಟೀಕಿಸುವ ಬರದಲ್ಲಿ ಜೋಶಿ ಕರ್ನಾಟಕ ಮೂಲದ ಬ್ರಾಹ್ಮಣರಲ್ಲ, ಮಹಾರಾಷ್ಟ್ರ ಪೇಶ್ವೆ ವಂಶಸ್ಥರು. ಶೃಂಗೇರಿ ಮಠ ಒಡೆದವರು, ಶಮ್ಕರಾಚಾರ್ಯ ವಂಶಸ್ಥರನ್ನು ಓಡಿಸಿದವರು. ಕುಮಾರಸ್ವಾಮಿ ಹೇಳಿಕೆ ಬ್ರಾಹ್ಮಣ ಸಮುದಾಯವನ್ನು ಅವಮಾನ ಮಾಡುವ ಹೇಳಿಕೆ. ಕುಮಾರಸ್ವಾಮಿ ಕ್ಷಮೆ ಯಾಚಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು.