
ಪ್ರಹ್ಲಾದ್ ಜೋಶಿ ಸಿಎಂ ಮಾಡಲು ಆರ್ ಎಸ್ ಎಸ್ ಹುನ್ನಾರ ನಡೆಸುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಸಿ.ತಮ್ಮಣ್ಣ, ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಆದರೆ ಜಾತಿ ವಿಚಾರ ಬದಾಗ ಮಾತನಾಡುವುದನ್ನು ಕಡಿಮೆ ಮಾಡಬೇಕು ಎಂದರು.
ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ, ನಾನು ಬ್ರಾಹ್ಮಣ ವಿರೋಧಿಯಲ್ಲ. ಬ್ರಾಹ್ಮಣರು ಸುಸಂಸ್ಕೃತರು. ಈ ದೇಶಕ್ಕೆ ಸಂಸ್ಕೃತಿ, ಸಂಸ್ಕಾರ ಕೊಟ್ಟವರು. ಬ್ರಾಹ್ಮಣರ ಸಂಸ್ಕೃತಿ ತುಂಬ ಇಷ್ಟಪಡುವವನು ನಾನು. ಬ್ರಾಹ್ಮಣ ಅಂದರೆ ಒಂದು ಜಾತಿಗೆ ಸೀಮಿತವಲ್ಲ. ಯಾರು ಬ್ರಾಹ್ಮಣತ್ವವನ್ನು ನಿಜವಾಗಿ ಪಾಲಿಸುತ್ತಾರೆ ಅವರು ಬ್ರಾಹ್ಮಣರು. ಜಾತಿ ವಿಚಾರ ಬಂದಾಗ ಮಾತನಾಡದಿರುವುದು ಸೂಕ್ತ ಎಂದು ಕುಮಾರಸ್ವಾಮಿಯವರಿಗೆ ಸಲಹೆ ನೀಡುತ್ತೇನೆ ಎಂದರು.

