ವಾರಾಂತ್ಯಗಳಲ್ಲಿ ಜನ ವಿಹಾರ, ಸಿನಿಮಾ, ಟ್ರಿಪ್ ಜೊತೆಗೆ ಹಾಟ್ ಡ್ರಿಂಕ್ಸ್ ಮೊರೆ ಹೋಗ್ತಾರೆ. ಹಾಟ್ ಡ್ರಿಂಕ್ಸ್ ಇಲ್ಲದೇ ಕೆಲವರ ವೀಕೆಂಡ್ ಮುಕ್ತಾಯವಾಗುವುದಿಲ್ಲ.
ಅದಾಗ್ಯೂ, ಆಲ್ಕೋಹಾಲ್‌ನ ಹೆಚ್ಚಿನ ಬೆಲೆಯು ಸಂಭ್ರಮಾಚರಣೆಗೆ ಶಾಕ್ ಕೊಡುತ್ತೆ. ಹೀಗಾಗಿ ದುಡ್ಡಿಲ್ಲದವರು ತಮ್ಮ ನೆಚ್ಚಿನ ಪಾನೀಯಗಳನ್ನು ಕುಡಿಯಲು ಆಗದಿರಬಹುದು.
ಆದರೆ ನೆಟ್ಟಿಗರು ಮದ್ಯವು ಅತಿ ಕಡಿಮೆ ಬೆಲೆಗೆ ಸಿಗುವ ಬಿಲ್ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೌಕಾಪಡೆಯ ಅಧಿಕಾರಿಗಳಿಗೆ ಮದ್ಯದ ಬೆಲೆಯು ತುಂಬಾ ಕಡಿಮೆಯಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಅನಂತ್ ಎಂಬ ಟ್ವಿಟರ್ ಬಳಕೆದಾರರು ದೆಹಲಿಯ ನೌಕಾಪಡೆಯ ಅಧಿಕಾರಿಗಳ ಮೆಸ್‌ನಲ್ಲಿ ಆಲ್ಕೊಹಾಲ್ ಯುಕ್ತ ಪಾನೀಯಗಳ ಬೆಲೆಯುಳ್ಳ ಮೆನು ಪಟ್ಟಿ ಹಾಕಿದ್ದಾರೆ. ಪಾನೀಯಗಳ ಬಜೆಟ್ ಸ್ನೇಹಿ ಬೆಲೆಗಳು ಬಹಳಷ್ಟು ಗಮನ ಸೆಳೆದಿವೆ.
ಮೆನುವಿನ ಚಿತ್ರವನ್ನು ಹಂಚಿಕೊಂಡ ಅನಂತ್, “ನನ್ನ ಬೆಂಗಳೂರಿನ ಮೆದುಳು ಈ ಬೆಲೆಗಳನ್ನು ಗ್ರಹಿಸಲು ಸಾಧ್ಯವಿಲ್ಲ” ಎಂದು ಬರೆದಿದ್ದಾರೆ.
ಹಂಚಿಕೊಂಡಿರುವ ಚಿತ್ರದಲ್ಲಿ, ಹೆಚ್ಚಿನ ಪಾನೀಯಗಳ ಬೆಲೆ 100 ರೂ.ಗಿಂತ ಕಡಿಮೆಯಿದೆ. ಆಶ್ಚರ್ಯಚಕಿತರಾದ ನೆಟ್ಟಿಗರು ಕಡಿಮೆ ಬೆಲೆಯ ಪಾನೀಯಗಳ ಬಗ್ಗೆ ಅಚ್ಚರಿಯಿಂದ ಕಮೆಂಟ್ ಮಾಡಿದ್ದಾರೆ.