ವೈಜಾಗ್: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಡಿಸಲಾಗುತ್ತಿರುವ ಆಹಾರದ ಕಳಪೆ ಗುಣಮಟ್ಟವನ್ನು ತೋರಿಸುವ ವೀಡಿಯೊ ಒಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ವೈಜಾಗ್‌ನಿಂದ ಹೈದರಾಬಾದ್‌ಗೆ ವಂದೇ ಭಾರತ್ ರೈಲಿನಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ಈ ವಿಡಿಯೋವನ್ನು ಪ್ರತಾಪ್ ಕುಮಾರ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿಕ್ಕ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿ ರೈಲಿನಲ್ಲಿ ಬಡಿಸಿದ ವಡಾದಿಂದ ಎಣ್ಣೆಯನ್ನು ಹಿಂಡುತ್ತಿರುವುದನ್ನು ಕಾಣಬಹುದು. ಪ್ರಯಾಣಿಕರ ಪ್ರಕಾರ, ವಂದೇ ಭಾರತ್ ರೈಲಿನಲ್ಲಿ ಆಹಾರದ ಬೆಲೆಗಳು ಹೆಚ್ಚಿಗೆ ಇದೆ. ಆದರೆ ಗುಣಮಟ್ಟ ಮಾತ್ರ ಕಳಪೆ ಎಂದು ದೂರುತ್ತಿದ್ದಾರೆ.
“ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷೆಯಿಂದ ಪರಿಚಯಿಸಿದ ವಂದೇ ಭಾರತ್ ರೈಲಿನಲ್ಲಿ ಆಹಾರದ ಬೆಲೆಗಳು ತುಂಬಾ ಹೆಚ್ಚಾಗಿದೆ, ಗುಣಮಟ್ಟವು ತುಂಬಾ ಕೆಟ್ಟದಾಗಿದೆ” ಎಂದು ಪೋಸ್ಟ್‌ನ ಶೀರ್ಷಿಕೆಯಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಟ್ವಿಟರ್ ಬಳಕೆದಾರರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವು ಬಳಕೆದಾರರು ಇದನ್ನು ಒಪ್ಪದಿದ್ದರೂ, ಇತರರು ಇಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂದು ಪ್ರತಿಕ್ರಿಯೆ ಮಾಡಿದ್ದಾರೆ.