ನಾಯಿ ಮರಿಯ ಜೊತೆ ಯುವಕ, ಯುವತಿ ವಿಕೃತಿ: ಇಬ್ಬರಿಗೂ ಶಿಕ್ಷಿಸುವಂತೆ ನೆಟ್ಟಿಗರ ಒತ್ತಾಯ

ಜನರು ತಮ್ಮ ಸಾಕುಪ್ರಾಣಿಗಳೊಂದಿಗೆ ಹೃದಯಸ್ಪರ್ಶಿ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ವಿಡಿಯೋಗಳು ಮನುಷ್ಯರ ಅನಾಗರಿಕ ಮುಖವನ್ನು ತೋರಿಸುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.
ಯುವಕ ಮತ್ತು ಯುವತಿಯಿಬ್ಬರು ನಾಯಿಯೊಂದಕ್ಕೆ ಹಿಂಸಿಸುವ ವಿಡಿಯೋ ಇದಾಗಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ನೆಟ್ಟಿಗರನ್ನು ತೀವ್ರವಾಗಿ ಕೆರಳಿಸಿದೆ.

ಓರ್ವ ಯುವಕ ಮತ್ತು ಯುವತಿ ಬೀದಿ ನಾಯಿ ಮರಿಯನ್ನು ಅದರ ಹಿಂಗಾಲುಗಳಿಂದ ಹಿಡಿದು ಆಟಿಕೆಯಂತೆ ಜೋಕಾಲಿ ಮಾಡಿ ಹಿಂಸಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಅಲ್ಲಿಯೇ ಇರುವ ಮಂಗಗಳನ್ನು ಹೆದರಿಸಲು ನಾಯಿ ಮರಿಯನ್ನು ಅತ್ತ ಕಡೆ ಎಸೆದಂತೆ ಮಾಡುತ್ತಾನೆ. ನಂತರ ಅದನ್ನು ತಲೆಕೆಳಗಾಗಿ ಹಿಡಿಯುತ್ತಾನೆ. ಇಬ್ಬರೂ ಕೇಕೇ ಹಾಕಿ ನಗುವುದನ್ನು ಕಾಣಬಹುದು.

ಕೊನೆಗೆ ವಿಚಿತ್ರ ಎಂಬಂತೆ ಯುವತಿ ನಾಯಿಯನ್ನು ಮುದ್ದಿಸುತ್ತಾಳೆ. ಈ ವಿಚಿತ್ರ ವರ್ತನೆ ನೆಟ್ಟಿಗರನ್ನು ಕೆರಳಿಸಿದೆ. ಇಬ್ಬರಿಗೂ ಕಠಿಣ ಶಿಕ್ಷೆ ವಿಧಿಸಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಇವರ ಮನಸ್ಥಿತಿ ಅದೆಷ್ಟು ಕ್ರೂರ ಆಗಿರಬೇಕು ಎಂದು ಹಲವರು ಹೇಳಿದ್ದಾರೆ.

https://twitter.com/AwanishSharan/status/1621768274303393794?ref_src=twsrc%5Etfw%7Ctwcamp%5Etweetembed%7Ctwterm%5E1

https://twitter.com/Mahesh_MHA/status/1621768908238888962?ref_src=twsrc%5Etfw%7Ctwcamp%5Etweetembed%7Ctwterm%5E1621768908238888962%7Ctwgr%5Eaad6ec73ca97804aa9221bf1a22aa4fa7c3028cd%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-and-woman-swing-puppy-around-by-its-legs-in-viral-video-twitter-is-horrified-2330433-2023-02-04

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read