ತುಮಕೂರು: ಸಿದ್ದಗಂಗಾ ಮಠದಲ್ಲಿ ನಡೆಯಬೇಕಿದ್ದ ಪ್ರಸಿದ್ಧ ದನಗಳ ಜಾತ್ರೆ ರದ್ದು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಾನುವಾರುಗಳಲ್ಲಿ ಹೆಚ್ಚುತ್ತಿರುವ ಚರ್ಮಗಂಟು ರೋಗ ಹಿನ್ನೆಲೆಯಲ್ಲಿ ತುಮಕೂರಿನ ಹೊರವಲಯದ ಕ್ಯಾತ್ಸಂದ್ರದ ಬಳಿ ಸಿದ್ದಗಂಗಾ ಮಠದಲ್ಲಿ ನಡೆಯಬೇಕಿದ್ದ ದನಗಳ ಜಾತ್ರೆ ರದ್ದು ಮಾಡಲಾಗಿದೆ.
ಸಿದ್ದಲಿಂಗೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಕಳೆದ 50 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಐತಿಹಾಸಿಕ ದನಗಳ ಜಾತ್ರೆ ಇದಾಗಿತ್ತು. ಆದರೆ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ದನಗಳ ಜಾತ್ರೆ ರದ್ದು ಮಾಡಲಾಗಿದೆ.