ಅಪಘಾತದ ವೇಳೆ ಶ್ವಾನವೊಂದು ಕಾರಿನ ಬಂಪರ್ ಒಳಗೆ ಸೇರಿಕೊಂಡು ಸುಮಾರು 70 ಕಿ.ಮೀ. ದೂರ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಸಾಗಿದ ಅಪರೂಪದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಪುತ್ತೂರು ನಿವಾಸಿ ಸುಬ್ರಹ್ಮಣ್ಯ ತಮ್ಮ ಕುಟುಂಬದ ಜೊತೆ ಗುರುವಾರದಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
ಅವರು ವಾಪಸ್ ಬರುವ ವೇಳೆ ಬಳ್ಬ ಸಮೀಪ ಕಾರಿಗೆ ನಾಯಿ ಅಡ್ಡ ಬಂದ ಪರಿಣಾಮ ಡಿಕ್ಕಿ ಹೊಡೆದಿದೆ. ಸುಬ್ರಹ್ಮಣ್ಯ ಅವರು ನಾಯಿಗೆ ಏನಾಗಿದೆಯೋ ಎಂಬುದನ್ನು ಪರಿಶೀಲಿಸಲು ಕಾರಿನಿಂದ ಇಳಿದಾಗ ಅವರಿಗೆ ಏನೂ ಕಾಣಿಸಿಲ್ಲ.
ನಾಯಿ ಓಡಿ ಹೋಗಿರಬಹುದು ಎಂದು ಭಾವಿಸಿದ ಅವರು ಕಾರು ಚಾಲನೆ ಮಾಡಿಕೊಂಡು ಬಂದಿದ್ದು, ಮನೆಗೆ ಬಂದ ವೇಳೆ ಬಂಪರ್ ನಲ್ಲಿ ಮಧ್ಯೆ ನಾಯಿ ಸಿಲುಕಿರುವುದು ಕಂಡುಬಂದಿದೆ. ಬಳಿಕ ಮೆಕ್ಯಾನಿಕ್ ಕರೆಯಿಸಿ ನಾಯಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ.