HomeInternationalಡೇಟಿಂಗ್​ ಮಾಡ ಬಯಸಿದ್ದ ಯುವಕನ ಕೆಟ್ಟ ಗುಣ ಹಂಚಿಕೊಂಡ ಯುವತಿ: ವಿಡಿಯೋ ವೈರಲ್​

ಡೇಟಿಂಗ್​ ಮಾಡ ಬಯಸಿದ್ದ ಯುವಕನ ಕೆಟ್ಟ ಗುಣ ಹಂಚಿಕೊಂಡ ಯುವತಿ: ವಿಡಿಯೋ ವೈರಲ್​

ಡೇಟಿಂಗ್​ ಎನ್ನುವುದು ಇತ್ತೀಚೆಗೆ ಸಾಮಾನ್ಯ ಎನಿಸಿಬಿಟ್ಟಿದೆ. ವಿದೇಶಗಳಲ್ಲಿದ್ದ ಈ ಒಂದು ಪದ್ಧತಿ ಭಾರತದಲ್ಲಿಯೂ ಶುರುವಾಗಿ ವರ್ಷಗಳೇ ಕಳೆದಿವೆ. ಒಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್‌ಗೆ ಹೋಗುವುದು ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಎನ್ನುವುದು ಈಗಿನವರ ಅನಿಸಿಕೆ. ನಿರ್ದಿಷ್ಟ ವ್ಯಕ್ತಿಯೊಂದಿಗೆ ಮುಂದಿನ ಪಯಣವನ್ನು ಬೆಳೆಸಬಹುದೆ ಎಂದು ನಿರ್ಧರಿಸಲು ನಮಗೆ ಸುಲಭವಾಗುತ್ತದೆ ಎನ್ನುವುದು ಅವರ ಅನಿಸಿಕೆ.

ಇಂಥದ್ದೇ ಒಂದು ಡೇಟಿಂಗ್​ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರಲ್ಲಿ ಟಿಕ್‌ಟಾಕ್​ ಬಳಕೆದಾರಳೊಬ್ಬಳು ತನಗಾಗಿರುವ ಘೋರ ಅನುಭವದ ಕುರಿತು ಶೇರ್​ ಮಾಡಿದ್ದು, ಅದೀಗ ವೈರಲ್​ ಆಗಿದೆ. ತಾನು ಡೇಟಿಂಗ್​ಗೆ ಹೋಗಬಯಸಿದ್ದ ಹುಡುಗನ ಸಂಭಾಷಣೆಯ ವೀಡಿಯೊ ರೆಕಾರ್ಡಿಂಗ್‌ಗಳನ್ನು ಹಂಚಿಕೊಂಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆತ ಅವನ ಅಭಿಪ್ರಾಯಗಳನ್ನು ಮತ್ತು ಇಷ್ಟಗಳನ್ನು ತಮ್ಮ ಮೇಲೆ ಹೇರಲು ಪ್ರಯತ್ನಿಸಿದ್ದ. ಈ ಮೂಲಕ ಆತ ತನ್ನನ್ನು ಕಂಟ್ರೋಲ್ ಮಾಡಲು ಬಯಸಿದ್ದ. ಆತನೊಬ್ಬ ಕಂಟ್ರೋಲ್​ ಫ್ರೀಕ್ ಎಂದು ಯುವತಿ ಹೇಳಿಕೊಂಡಿದ್ದಾಳೆ. ತನಗೆ ಇಷ್ಟವಾದ ಹಿಸುಕಿದ ಆಲೂಗಡ್ಡೆಯನ್ನೇ ನಾನೂ ತಿನ್ನಬೇಕು ಅನ್ನುತ್ತಿದ್ದ. ಮಾತ್ರವಲ್ಲದೇ ನನ್ನ ತೂಕ ಹೆಚ್ಚಿರುವ ಕಾರಣ ವೈನ್ ಕುಡಿಯಬೇಡ ಎಂದು ಕಂಟ್ರೋಲ್​ ಮಾಡತೊಡಗಿದ್ದ ಎಂದು ಯುವತಿ ಹೇಳಿಕೊಂಡಿದ್ದಾಳೆ.

“ಪ್ರಾಮಾಣಿಕವಾಗಿ ನಾವು ಪುರುಷರಿಗೆ ಅವಕಾಶಗಳನ್ನು ನೀಡುವುದನ್ನು ನಿಲ್ಲಿಸಬೇಕಾಗಿದೆ. ನಾನು ಹಾಗೆಯೇ ಮಾಡುತ್ತಿದ್ದೇನೆ ” ಎಂದು ಈಕೆ ಬರೆದುಕೊಂಡಿದ್ದು, ಈ ಟ್ವೀಟ್​ಗೆ 1 ದಶಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular