
ತೇಜಸ್ವಿನಿ ಗಂಗಪ್ಪ ಗುಜ್ಜರ್ (21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕ್ರಿಮಿನಾಶಕ ಸೇವಿಸಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಎರಡು ವರ್ಷಗಳಿಂದ ತೇಜಸ್ವಿನಿ ಹಾಗೂ ಆಸಿಫ್ ದೇಸಾಯಿ ಪ್ರೀತಿಸುತ್ತಿದ್ದರು. ಆಸೀಫ್, ತೇಜಸ್ವಿನಿಯನ್ನು ವಿವಾಹವಾಗುವುದಾಗಿ ನಂಬಿಸಿ ಮೋಸಮಾಡಿದ್ದ ಎನ್ನಲಾಗಿದೆ. ಮದುವೆಯಾಗಲು ಆಸಿಫ್ ನಿರಾಕರಿಸಿದ್ದ. ಇದರಿಂದ ಮನನೊಂದ ತೇಜಸ್ವಿನಿ ಕ್ರಿಮಿನಾಷಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಲವ್ ಜಿಹಾದ್ ಗೆ ಯುವತಿ ಬಲಿಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಮಗಳ ಸಾವಿಗೆ ಆಸಿಫ್ ದೇಸಾಯಿ ಕಾರಣ ಎಂದು ಯುವತಿ ಪೋಷಕರು ಕಣ್ಣೀರಿಟ್ಟಿದ್ದಾರೆ. ಈ ಹಿಂದೆ ಕೊಲೆಯತ್ನ ಕೇಸ್ ನಲ್ಲಿ ಆಸಿಫ್ ಜೈಲು ಸೇರಿದ್ದ ಎನ್ನಲಾಗಿದೆ. ಆರೋಪಿ ಆಸಿಫ್ ನನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ತೇಜಸ್ವಿನಿ ಪೋಷಕರು ಒತ್ತಾಯಿಸಿದ್ದಾರೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

