HomeCrimeSHOCKING NEWS: ಸಹೋದ್ಯೋಗಿಯ ಪತ್ನಿ ತೋರಿಸದಿದ್ದಕ್ಕೆ ಆತನನ್ನೇ ಇರಿದು ಕೊಂದ ವ್ಯಕ್ತಿ

SHOCKING NEWS: ಸಹೋದ್ಯೋಗಿಯ ಪತ್ನಿ ತೋರಿಸದಿದ್ದಕ್ಕೆ ಆತನನ್ನೇ ಇರಿದು ಕೊಂದ ವ್ಯಕ್ತಿ

ಬೆಂಗಳೂರು: ಸಹೋದ್ಯೋಗಿ ಆತನ ಪತ್ನಿಯನ್ನು ತನಗೆ ವಿಡಿಯೋ ಕಾಲ್ ನಲ್ಲಿ ತೋರಿಸಲಿಲ್ಲ ಎಂಬ ಕಾರಣಕ್ಕೆ ಸಹೋದ್ಯೋಗಿಯನ್ನೇ ಕತ್ತರಿಯಿಂದ ಇರಿದು ಕೊಂದಿರುವ ವಿಚಿತ್ರ ಘಟನೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ನಡೆದಿದೆ.

ರಾಜೇಶ್ ಮಿಶ್ರಾ ಕೊಲೆಯಾದ ದುರ್ದೈವಿ. ಸುರೇಶ್ ಹಾಗೂ ರಾಜೇಶ್ ಮಿಶ್ರಾ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುರೇಶ್ ತನ್ನ ಪತ್ನಿಯೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ರಾಜೇಶ್ ಮಿಶ್ರಾಗೆ ನಿನ್ನ ಪತ್ನಿಯನ್ನೂ ತೋರಿಸು ಎಂದು ಹೇಳಿದ್ದಾನೆ. ಇದಕ್ಕೆ ರಾಜೇಶ್ ತನ್ನ ಪತ್ನಿಯನ್ನು ನಿನಗೆ ಯಾಕೆ ತೋರಿಸಬೇಕು ಎಂದು ಪ್ರಶ್ನಿಸಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಪರೀತಕ್ಕೆ ಹೋಗಿದೆ. ಕೋಪದ ಬರದಲ್ಲಿ ಸುರೇಶ್, ರಾಜೇಶ್ ಮಿಶ್ರಾನ ಹೊಟ್ಟೆಗೆ ಕತ್ತರಿಯಿಂದ ಇರಿದು ಕೊಂದಿದ್ದಾನೆ.

ಪ್ರಕರಣ ಸಂಬಂಧ ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಸುರೇಶ್ ನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular