ಅನೇಕರು ಚಹಾವನ್ನು ಇಷ್ಟಪಡುತ್ತಾರೆ. ಚಹಾದೊಂದಿಗೆ ದಿನವನ್ನು ಪ್ರಾರಂಭಿಸ್ತಾರೆ. ಕೆಲವರು ಬೆಳಗಿನ ಉಪಹಾರದ ಜೊತೆಗೆ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಆದರೆ ಕೆಲವೊಂದು ನಿರ್ದಿಷ್ಟ ಆಹಾರ ಪದಾರ್ಥಗಳ ಜೊತೆಗೆ ಅಪ್ಪಿತಪ್ಪಿಯೂ ಚಹಾವನ್ನು ಕುಡಿಯಬಾರದು. ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ನಿಂಬೆಹಣ್ಣು– ನೀವು ನಿಂಬೆ ಅಥವಾ ನಿಂಬೆಯಿಂದ ತಯಾರಿಸಿದ ವಸ್ತುಗಳನ್ನು ಚಹಾದೊಂದಿಗೆ ಸೇವಿಸಿದರೆ, ಅದು ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗಬಹುದು. ಗ್ಯಾಸ್, ಬರ್ನಿಂಗ್ ಸೆನ್ಸೇಶನ್ ಅಥವಾ ಅಸಿಡಿಟಿ ಸಮಸ್ಯೆಗಳ ಸಾಧ್ಯತೆಯನ್ನು ಅದು ಹೆಚ್ಚಿಸುತ್ತದೆ.
ಹಸಿರು ತರಕಾರಿಗಳು– ಚಹಾದೊಂದಿಗೆ ಹಸಿರು ತರಕಾರಿಗಳನ್ನು ಸೇವಿಸಬಾರದು. ಹಾಗೇನಾದ್ರೂ ಮಾಡಿದ್ರೆ ತರಕಾರಿಗಳ ಪೋಷಕಾಂಶಗಳು ನಿಮಗೆ ಸಿಗುವುದಿಲ್ಲ. ಚಹಾವು ಎಲ್ಲಾ ಗುಣಲಕ್ಷಣಗಳನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಚಹಾದ ಜೊತೆಗೆ ಹಸಿರು ತರಕಾರಿಗಳನ್ನು ತಿನ್ನಬೇಡಿ.
ಅರಿಶಿನ– ಅರಿಶಿನ ಮತ್ತು ಚಹಾವನ್ನು ಸಂಯೋಜಿಸಿದಾಗ ಇವೆರಡನ್ನೂ ಒಟ್ಟಿಗೆ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಇವೆರಡನ್ನು ಒಟ್ಟಿಗೆ ತಿಂದರೆ ಅಸಿಡಿಟಿ ಮತ್ತು ಹೊಟ್ಟೆ ಉಬ್ಬರಿಸುವಿಕೆ ಉಂಟಾಗುತ್ತದೆ.
ಮೊಸರು– ಹಾಲಿನಿಂದ ಮಾಡಿದ ಪದಾರ್ಥವನ್ನು ಮೊಸರಿನೊಂದಿಗೆ ಸೇವಿಸಿದರೆ, ಅದು ಗ್ಯಾಸ್, ಹೊಟ್ಟೆಉರಿ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಹಾಲು ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದನ್ನು ತಪ್ಪಿಸಬೇಕು. ಮೊಸರಿನಿಂದ ಮಾಡಿದ ತಿನಿಸಿನೊಂದಿಗೆ ಚಹಾವನ್ನು ಕೂಡ ಸೇವಿಸಬಾರದು.