ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಬಹುತೇಕರು ಜಿಮ್ ಗಳಿಗೆ ಹೋಗುತ್ತಾರೆ. ಅಲ್ಲದೆ ತಮ್ಮ ದೇಹ ಸೌಂದರ್ಯವನ್ನು ಮೆಂಟೇನ್ ಮಾಡಲು ಕೆಲವೊಂದು ಜಿಮ್ ಗಳಲ್ಲಿ ನೀಡಲಾಗುವ ಪ್ರೋಟೀನ್ ಯುಕ್ತ ಪೌಡರ್ ಅನ್ನು ಸೇವಿಸುತ್ತಾರೆ. ಆದರೆ ಇದೀಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಬಹಿರಂಗಪಡಿಸಿರುವ ಸುದ್ದಿಯೊಂದು ಬೆಚ್ಚಿ ಬೀಳಿಸುವಂತಿದೆ.
ಹೌದು, ರಾಜ್ಯದ ಕೆಲ ಜಿಮ್ ಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ 81 ಮಾದರಿಯ ಪ್ರೋಟೀನ್ ಯುಕ್ತ ಪೌಡರ್ ಅನ್ನು ಪರಿಶೀಲಿಸಿದ ವೇಳೆ ಇವುಗಳ ಪೈಕಿ 54 ನೈಜ ಬ್ರಾಂಡ್ ನ ಪುಡಿಗಳೇ ಅಲ್ಲ ಎಂಬುದು ಪತ್ತೆಯಾಗಿದೆ. ಅಲ್ಲದೆ ಚಿಕ್ಕಮಗಳೂರಿನ ಜಿಮ್ ಒಂದರಲ್ಲಿ ಮಾರಲಾಗುತ್ತಿದ್ದ ಈ ಪೌಡರ್ ಬಳಕೆಗೂ ಸಹ ಯೋಗ್ಯವಾಗಿರಲಿಲ್ಲ ಎಂದು ಹೇಳಲಾಗಿದೆ.
ಅಲ್ಲದೆ ಈ ಪೌಡರ್ ಗಳ ಪಾಕೆಟ್ ಮೇಲೆ fssai ಮಾನದಂಡದ ಪ್ರಕಾರ ಯಾವುದೇ ಲೇಬಲ್ ಇರಲಿಲ್ಲ. ಜೊತೆಗೆ ಸಾವಯವ ಉತ್ಪನ್ನ ಎಂದು ನಮೂದಿಸಿದ್ದರೂ ಸಹ ಅದಕ್ಕೆ ಯಾವುದೇ ಅಧಿಕೃತ ಪ್ರಮಾಣ ಪತ್ರ ಇರಲಿಲ್ಲವೆಂದು ತಿಳಿದು ಬಂದಿದೆ. ಇಂತಹ ಉತ್ಪನ್ನಗಳನ್ನು ಸೇವಿಸಿದರೆ ಜಿಮ್ ಹೋಗುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಸಾವು ಸಹ ಸಂಭವಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.