alex Certify 8 ದಶಕಗಳ ಬಳಿಕ ದಲಿತರಿಗೆ ಕೊನೆಗೂ ತಿರುವಣ್ಣಾಮಲೈ ಮುತ್ತು ಮಾರಿಯಮ್ಮ ದೇಗುಲ ಪ್ರವೇಶಕ್ಕೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8 ದಶಕಗಳ ಬಳಿಕ ದಲಿತರಿಗೆ ಕೊನೆಗೂ ತಿರುವಣ್ಣಾಮಲೈ ಮುತ್ತು ಮಾರಿಯಮ್ಮ ದೇಗುಲ ಪ್ರವೇಶಕ್ಕೆ ಅವಕಾಶ

ಜಾತಿ ತಾರತಮ್ಯ ದೇಶದ ಹಲವು ಭಾಗಗಳಲ್ಲಿ ಇನ್ನೂ ತಾಂಡವವಾಡುತ್ತಿದ್ದು, ಅಸ್ಪೃಶ್ಯತೆಯ ಆಚರಣೆ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತದೆ. ಇದನ್ನು ಸಂಪೂರ್ಣವಾಗಿ ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿದ್ದು, ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.

ಹೌದು, ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಮುತ್ತು ಮಾರಿಯಮ್ಮ ದೇಗುಲ ಪ್ರವೇಶಕ್ಕೆ 80 ವರ್ಷಗಳ ಬಳಿಕ ದಲಿತ ಸಮುದಾಯದ ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ಮೇಲ್ವರ್ಗದ ಜನರ ವಿರೋಧದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸುಮಾರು 300 ಮಂದಿ ದೇವರ ದರ್ಶನ ಪಡೆದಿದ್ದಾರೆ.

ಈ ದೇಗುಲದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುವ ಕುರಿತಂತೆ ಇತ್ತೀಚೆಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಲಾಗಿತ್ತು. ಅಂತಿಮವಾಗಿ ಸೋಮವಾರದಂದು ದಲಿತರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...