WATCH: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನಿಂದ ಗುಂಡಿನ ದಾಳಿ

ರಾಜಸ್ಥಾನದ ಜೈಪುರದ ನೈಟ್‌ ಕ್ಲಬ್‌ ನ ಆವರಣದಲ್ಲಿ ಲಾರೆನ್ಸ್ ಬಿಷ್ಣೋಯ್ ತಂಡದ ಸದಸ್ಯರು ಗುಂಡಿನ ದಾಳಿ ನಡೆಸಿದ್ದಾರೆ. ವರದಿಗಳ ಪ್ರಕಾರ ಶನಿವಾರ ರಾತ್ರಿ ಗುಂಡಿನ ದಾಳಿ ಘಟನೆ ಸಂಭವಿಸಿದೆ.

ಶಸ್ತ್ರಸಜ್ಜಿತ ವ್ಯಕ್ತಿಗಳು 1 ಕೋಟಿ ರೂಪಾಯಿಯನ್ನ ನೀಡುವಂತೆ ನೈಟ್ ಕ್ಲಬ್ ಮಾಲೀಕರಿಗೆ ಎಚ್ಚರಿಕೆ ನೀಡಿದ ನಂತರ ಅಲ್ಲಿಂದ ತೆರಳಿದ್ದಾರೆ.

ಘಟನೆ ಬಳಿಕ ರೌಡಿ ಶೀಟರ್ ರಿತಿಕ್ ಠಾಕುರಾನಿ ಅಲಿಯಾಸ್ ರಿತಿಕ್ ಬಾಕ್ಸರ್ ಗುಂಡಿನ ದಾಳಿಯ ಹೊಣೆಯನ್ನು ವಹಿಸಿಕೊಂಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟಪಡಿಸಿದ್ದಾನೆ. ವರದಿಗಳ ಪ್ರಕಾರ ರಿತಿಕ್ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾನೆ.

ರಾತ್ರಿ 11:50 ರ ಸುಮಾರಿಗೆ ‘ಡೇಸ್ ಹೋಟೆಲ್’ ಮಾಲೀಕರು ಜಿ-ಕ್ಲಬ್ ಇರುವ ಕಟ್ಟಡಕ್ಕೆ ಪ್ರವೇಶಿಸಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಟೆಲ್ ಬಳಿ ಬೈಕ್ ನಲ್ಲಿ ಬಂದ ಮೂವರು ಗುಂಡಿನ ದಾಳಿ ನಡೆಸಿದ್ದಾರೆ. ಇಬ್ಬರು ಭದ್ರತಾ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡಿನ ದಾಳಿಯಿಂದ ಅತಿಥಿಗಳು ಹೇಗೋ ತಪ್ಪಿಸಿಕೊಂಡರು. ಘಟನೆಯ ನಂತರ ದುಷ್ಕರ್ಮಿಗಳು ಸ್ಥಳದಲ್ಲಿ ಎರಡು ಹಾಳೆಗಳನ್ನು ಎಸೆದು ಓಡಿಹೋದರು.

ಹಾಳೆಗಳಲ್ಲಿ ಹೋಟೆಲ್ ಮಾಲೀಕರು 1 ಕೋಟಿ ರೂ. ನೀಡಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಹಾಳೆಯ ಮೇಲೆ ಅನ್ಮೋಲ್ ಬಿಷ್ಣೋಯ್ ಮತ್ತು ರಿತಿಕ್ ಎಂಬ ಹೆಸರನ್ನ ನಮೂದಿಸಲಾಗಿತ್ತು.

https://twitter.com/TimesNow/status/1619976459476508672?ref_src=twsrc%5Etfw%7Ctwcamp%5Etweetembed%7Ctwterm%5E1619976459476508672%7Ctwgr%5E33b086351d364e346c45fb4a57852bc12ec037c4%7Ctwcon%5Es1_&ref_url=https%3A%2F%2Fwww.timesnownews.com%2Findia%2Fwatch-lawrence-bishnois-gang-member-opens-fire-at-premises-of-nightclub-in-jaipur-article-97440166

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read