ಈ ಹಣ್ಣುಗಳನ್ನು ಸಿಪ್ಪೆ ಸುಲಿಯದೇ ತಿಂದು ಲಾಭ ಪಡೆಯಿರಿ

ಹಣ್ಣುಗಳಲ್ಲಿ ಆರೋಗ್ಯದ ಖಜಾನೆಯೇ ಇದೆ. ಹಾಗಾಗಿ ನಾವು ಪ್ರತಿನಿತ್ಯ ಹಣ್ಣುಗಳನ್ನು ಸೇವಿಸಬೇಕು. ಆದರೆ ಕೇವಲ ಹಣ್ಣುಗಳನ್ನು ತಿನ್ನುವುದು ಉತ್ತಮ ಆರೋಗ್ಯಕ್ಕೆ ಸಾಕಾಗುವುದಿಲ್ಲ, ಅವುಗಳ ಸಿಪ್ಪೆ ಸಮೇತ ಸರಿಯಾದ ರೀತಿಯಲ್ಲಿ ತಿನ್ನುವುದು ಬಹಳ ಮುಖ್ಯ.

ಅನೇಕ ಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನಬೇಕು. ಸಿಪ್ಪೆ ಬಿಸಾಡಿದರೆ ಅವುಗಳ ಪೋಷಕಾಂಶಗಳು ಕಡಿಮೆಯಾಗುತ್ತವೆ. ಯಾಕಂದ್ರೆ ಹಣ್ಣುಗಳ ಸಿಪ್ಪೆಯಲ್ಲಿಯೂ ಪೋಷಕಾಂಶಗಳು ಇರುತ್ತವೆ.

ಕೆಮಿಕಲ್‌ ಹಾಕಿರುತ್ತಾರೆ ಎಂಬ ಭಯದಿಂದ ಬಹುತೇಕ ಎಲ್ಲಾ ಹಣ್ಣುಗಳನ್ನೂ ನಾವು ಸಿಪ್ಪೆ ತೆಗೆದು ತಿನ್ನುತ್ತೇವೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಏಕೆಂದರೆ ವಿಟಮಿನ್‌ಗಳು, ಖನಿಜಗಳು, ಫೈಬರ್ ಮತ್ತು ಎಂಟಿ ಒಕ್ಸಿಡೆಂಟ್‌ಗಳು ಹಣ್ಣುಗಳ ಸಿಪ್ಪೆಯಲ್ಲಿರುತ್ತವೆ. ಕೆಲವು ಹಣ್ಣುಗಳನ್ನು ಸಿಪ್ಪೆ ತೆಗೆದು ತಿನ್ನಲೇಬಾರದು.

ಪೇರ್‌ : ಮರಸೇಬು ಹಣ್ಣನ್ನು ಯಾವಾಗಲೂ ಸಿಪ್ಪೆಯೊಂದಿಗೆ ಸೇವಿಸಬೇಕು.ಇದರ ಸಿಪ್ಪೆಯಲ್ಲಿ ಎಂಟಿಒಕ್ಸಿಡೆಂಟ್ ಮತ್ತು ವಿಟಮಿನ್‌ಗಳಿರುತ್ತವೆ. ಮರಸೇಬನ್ನು ಸಿಪ್ಪೆಯೊಂದಿಗೆ ತಿಂದರೆ ದೇಹಕ್ಕೆ ಡಯೆಟರಿ ಫೈಬರ್ ಸಿಗುತ್ತದೆ.

ಸೀಬೆಕಾಯಿ ಅಥವಾ ಪೇರಲ ಹಣ್ಣು : ಪೇರಲವನ್ನು ಸಿಪ್ಪೆಯೊಂದಿಗೆ ಸೇವಿಸಬೇಕು. ಇದರಲ್ಲೂ ಎಂಟಿಒಕ್ಸಿಡೆಂಟ್‌ಗಳು, ವಿಟಮಿನ್‌ಗಳು, ಫೈಬರ್‌ಗಳು ಮತ್ತು ಖನಿಜಗಳು ಇರುತ್ತವೆ. ಅದಕ್ಕಾಗಿಯೇ ಪೇರಲ ಹಣ್ಣನ್ನು ಸಿಪ್ಪೆ ಸುಲಿದ ನಂತರ ತಿನ್ನಬಾರದು. ಶೀತ ಅಥವಾ ಕೆಮ್ಮು ಇದ್ದಾಗ ಅದನ್ನು ಸೇವಿಸಬಾರದು.

ಸೇಬು ಹಣ್ಣು : ಅನೇಕರು ಸೇಬುಹಣ್ಣಿನ ಸಿಪ್ಪೆ ತೆಗೆದು ತಿನ್ನುತ್ತಾರೆ. ಸೇಬಿನ ಸಿಪ್ಪೆಯಲ್ಲಿ ಎಂಟಿಒಕ್ಸಿಡೆಂಟ್ ಮತ್ತು ಫೈಬರ್ ಅಂಶಗಳಿರುತ್ತವೆ. ಹಾಗಾಗಿ ಸೇಬನ್ನು ಚೆನ್ನಾಗಿ ತೊಳೆದು ಸಿಪ್ಪೆ ಸಮೇತ ತಿನ್ನುವುದು ಉತ್ತಮ.

ಸಪೋಟಾ : ಸಪೋಟಾ ಹಣ್ಣನ್ನು ಕೂಡ ಸಿಪ್ಪೆ ಸಮೇತ ತಿನ್ನಬೇಕು. ಇದರ ಸಿಪ್ಪೆಯಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕಬ್ಬಿಣದ ಅಂಶಗಳಿವೆ.

ಕಿವಿ : ಕಿವಿ ಹಣ್ಣನ್ನು ಕೂಡ ಸಿಪ್ಪೆಯೊಂದಿಗೆ ಸೇವಿಸಬೇಕು. ಏಕೆಂದರೆ ಕಿವಿಯ ಸಿಪ್ಪೆಯಲ್ಲಿ ನಾರಿನಂಶ, ಫೋಲೇಟ್, ವಿಟಮಿನ್ ಇ ಮುಂತಾದವುಗಳಿವೆ. ಇವು ನಮ್ಮ ಆರೋಗ್ಯಕ್ಕೆ ಬಹಳ ಅವಶ್ಯಕ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read