BIG NEWS: ನನ್ನ ಬಳಿಯೂ 20 ಸಿಡಿಗಳಿವೆ, ಡಿಕೆಶಿ ವಿರುದ್ಧ 128 ಸಾಕ್ಷ್ಯಗಳಿವೆ; ಆದರೆ ಯಾವುದನ್ನೂ ಬಿಡುಗಡೆ ಮಾಡಲ್ಲ ಎಂದ ರಮೇಶ್ ಜಾರಕಿಹೊಳಿ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾನು ರಾಜಕೀಯವಾಗಿ ಅವರಿಗಿಂತ ಬೆಳೆಯುತ್ತೇನೆ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಿ ಸಿಡಿ ಷಡ್ಯಂತ್ರ ನಡೆಸಿದರು ಎಂದು ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ಮಹಾನಾಯಕನ ಬಗ್ಗೆ ಆಡಿಯೋ, ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಎಲ್ಲಾ ದಾಖಲೆಗಳಿವೆ ಎನ್ನುತ್ತಲೇ ಈಗ ಬಿಡುಗಡೆ ಮಾಡಲ್ಲ ಸಿಬಿಐಗೆ ವಹಿಸುತ್ತೇನೆ ಎಂದು ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ರಾಜಕಾರಣಿಯಾಗಲು ನಾಲಾಯಕ್, ಡಿಕೆಶಿ ಹಾಗೂ ವಿಷಕನ್ಯೆಯಿಂದ ಕಾಂಗ್ರೆಸ್ ನಾಶವಾಗುತ್ತದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ವೈಯಕ್ತಿಕ ಜೀವನ ಹಾಳು ಮಾಡಿದರು. ಓರ್ವ ಯುವತಿಯಿಂದ ನನ್ನ ತೇಜೋವಧೆ ಮಾಡಿಸಿದರು. ನನ್ನನ್ನು ಮುಗಿಸಲು ಸಿಡಿ ಷಡ್ಯಂತ್ರಕ್ಕೆ 40 ಕೋಟಿ ಖರ್ಚಾಗಿದೆ ಎಂದು ಹೇಳಿದ್ದಾರೆ. ಈಬಗ್ಗೆ ಡಿಕೆಶಿ ಆಡಿಯೋ ಇದೆ. ನನ್ನ ಬಳಿಯೂ ಅವರ 20 ಸಿಡಿಗಳಿವೆ, ಡಿಕೆಶಿವಕುಮಾರ್ ವಿರುದ್ಧ 128 ಸಾಕ್ಷ್ಯಗಳಿವೆ, ಸಾಕಷ್ಟು ದಾಖಲೆಗಳು ಇವೆ ಎಲ್ಲವನ್ನೂ ಸಿಬಿಐ ಅಧಿಕಾರಿಗಳಿಗೆ ವಹಿಸುತ್ತೇನೆ. ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಸಿಡಿ ಪ್ರಕರಣದ ಯುವತಿ, ನರೇಶ್, ಶ್ರವಣ್ ಹಾಗೂ ಡಿಕೆಶಿವಕುಮಾರ್ ಆಂಡ್ ಕಂಪನಿಯನ್ನು ಬಂಧಿಸಬೇಕು. ಯುವತಿಯೊಬ್ಬಳನ್ನು ಬಂಧಿಸಿದರೆ ಎಲ್ಲವೂ ತಾನಾಗಿಯೇ ಹೊರಬರಲಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ರಾಜ್ಯದ 120 ಜನರ ಸಿಡಿ ಮಾಡಿಕೊಂಡಿದ್ದಾರೆ. ಸಿಡಿ ತೋರಿಸಿಯೇ ಎಲ್ಲಾ ನಾಯಕರ ಬಾಯಿ ಮುಚ್ಚಿಸಿ ಧಮ್ಕಿ ಹಾಕುತ್ತಾರೆ. ಒಂದು ಕಾಲದಲ್ಲಿ ಏನೂ ಇಲ್ಲದ ಡಿಕೆಶಿ ಲೂಟಿ ಮಾಡಿ ಆಗರ್ಭ ಶ್ರೀಮಂತರಾಗಿದ್ದಾರೆ. ಕಾಂಗ್ರೆಸ್ ಬಿಡುವ ಮುನ್ನ ಡಿಕೆಶಿ ಹಾಗು ಅವರ ಪತ್ನಿ ನನ್ನ ಮನವೊಲಿಕೆಗೆ ಯತ್ನಿಸಿದ್ದರು. ಆದರೆ ನಿನ್ನ ಪತಿ ಸರಿಯಿಲ್ಲ ತಂಗಿ. ಹಾಗಾಗಿ ಪಕ್ಷ ತೊರೆಯುತ್ತೇನೆ ಎಂದು ಡಿಕೆಶಿವಕುಮಾರ್ ಪತ್ನಿಗೆ ತಿಳಿಸಿ ರಾಜೀನಾಮೆ ಕೊಟ್ಟಿದ್ದೆ. ನನಗಿಂತ ಎತ್ತರಕ್ಕೆ ಬೆಳೆಯುತ್ತಾನೆ ಎಂದು ನನ್ನ ವಿರುದ್ಧ ಸಂಚು ಮಾಡಿದರು. ನನ್ನ ಬಳಿ ಇರುವ ಎಲ್ಲಾ ದಾಖಲೆಗಳನ್ನು ಸಿಬಿಐ ಅಧಿಕಾರಿಗಳ ಮುಂದೆ ನೀಡುತ್ತೇನೆ. ಡಿಕೆಶಿ ಆಂಡ್ ಕಂಪನಿ ಬಂಧನವಾಗಬೇಕು ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read