ಬೆಂಗಳೂರು: ಐಡಿಬಿಐ ಬ್ಯಾಂಕ್ ನಲ್ಲಿ ಗ್ರಾಹಕರ ಎಫ್ ಡಿ ಹಣ ದೋಖಾ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ರಿಲೇಷನ್ ಶಿಪ್ ಮ್ಯಾನೇಜರ್ ಸಜಿಲ ಎಂಬ ಮಹಿಳೆಯನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿ ಮೂಲದ ಸಜಿಲ, ಬೆಂಗಳೂರಿನ ಗಾಂಧಿನಗರ ಶಾಖೆಯಲ್ಲಿ 18 ಕೋಟಿಗೂ ಹೆಚ್ಚು ವಂಚನೆ ಮಾಡಿದ್ದರು. ಐಡಿಬಿಐ ಬ್ಯಾಂಕ್ ಶಾಖೆಯಲ್ಲಿ ಲೆಕ್ಕ ಪರಿಶೋಧನೆ ವೇಳೆ ಸಜಿಲಾ ವಂಚನೆ ಬಯಲಾಗಿತ್ತು. ಬ್ಯಾಂಕ್ ಮ್ಯಾನೇಜರ್ ದೂರಿನ ಮೇರೆಗೆ ಈಗ ಸಜಿಲಾಳನ್ನು ಬಂಧಿಸಿದ್ದಾರೆ.
ಇನ್ನು ಪ್ರಕರಣ ಸಂಬಂಧ ಸಜಿಲಾ ವಿರುದ್ಧ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ. ಬಂಧಿತ ಸಜಿಲಾ ವಿಚಾರಣೆ ವೇಳೆ ಗ್ರಾಹಕರ 5 ಕೋಟಿ ಹಣವನ್ನು ಮತ್ತೊಬ್ಬರಿಗೆ ನೀಡಿದ್ದಾಗಿ ಹೇಳಿದ್ದು, ಉಳಿದ ಹಣವನ್ನು ಎಲ್ ಐ ಸಿ ಬಾಂಡ್ ಗೆ ಇನ್ ವೆಸ್ಟ್ ಮಾಡಿದ್ದಾಗಿ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿದೆ.