ಸವಾರರಾಗಲಿ, ಚಾಲಕರಾಗಲಿ ಅಥವಾ ಪಾದಚಾರಿಯಾಗಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಮತ್ತು ಅನುಸರಿಸಬೇಕು. ಅದರಲ್ಲಿಯೂ ವಾಹನ ಚಲಾಯಿಸುತ್ತಿರುವ ವೇಳೆ ನಾವು ನಮ್ಮ ಕಣ್ಣು ಮತ್ತು ಕಿವಿಗಳನ್ನು ತೆರೆದಿಡಬೇಕು. ಯಾವಾಗ ಏನು ಅನಿರೀಕ್ಷಿತ ಘಟನೆ ಸಂಭವಿಸುತ್ತದೋ ಹೇಳಲಾಗದು. ಭಾರಿ ಅಪಘಾತವೊಂದು ಅಲ್ಪದರಲ್ಲಿಯೇ ತಪ್ಪಿದ ವಿಡಿಯೋ ಒಂದು ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಾಲಕರು ಹೇಗೆ ಎಚ್ಚರಿಕೆ ವಹಿಸಬೆಕು ಎನ್ನುವುದನ್ನೂ ತೋರಿಸುತ್ತದೆ. ಪುಟ್ಟ ಮಗುವೊಂದು ಪೆಡಲ್ ಸ್ಕೂಟರ್ನಿಂದ ಆಟವಾಡುತ್ತಾ ನೇರವಾಗಿ ರಸ್ತೆಯ ಮೇಲೆ ಬರುವುದನ್ನು ವಿಡಿಯೋದಲ್ಲಿ ನೋಡಬಹುದು.
ಅತ್ತ ಕಡೆಯಿಂದ ವೇಗದಲ್ಲಿ ವಾಹನಗಳು ಬರುತ್ತಿರುತ್ತವೆ. ಕಾರು ಬರುವಾಗಲೇ ಸರಿಯಾಗಿ ಈ ಬಾಲಕ ರಸ್ತೆಯ ನಡುವೆ ಬರುತ್ತಾನೆ. ಕಾರಿನ ಚಾಲಕ ಸ್ವಲ್ಪ ದೂರದಿಂದ ಇದನ್ನು ನೋಡಿದ್ದಕ್ಕೆ ಮಗು ಬಚಾವಾಗುತ್ತದೆ. ಮಗುವಿನ ಹಿಂದೆ ಅದರ ತಾಯಿಯೂ ಓಡಿ ಬರುವುದನ್ನು ವಿಡಿಯೋದಲ್ಲಿ ನೋಡಬಹುದು.
ಆದರೆ ಕಾರಿನ ಚಾಲಕನೇನಾದರೂ ಸ್ವಲ್ಪ ವೇಗದಲ್ಲಿ ಇದ್ದರೆ ಮಗುವಿನ ಕಥೆ ಅಲ್ಲಿಗೇ ಮುಗಿಯುತ್ತಿತ್ತು. ತಾಯಿ ಓಡಿ ಬರುವಷ್ಟರಲ್ಲಿ ಒಂದರ ಹಿಂದೆ ಒಂದು ವಾಹನಗಳು ನಿಂತುಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಶಾಪಿಂಗ್ ಅಥವಾ ಇನ್ನಿತರ ಕೆಲಸಗಳಲ್ಲಿ ಪಾಲಕರು ಮೈಮರೆತರೆ ಎಷ್ಟು ಅಪಾಯಕಾರಿ ಎನ್ನುವುದನ್ನು ಇದು ತೋರಿಸುತ್ತದೆ.
https://twitter.com/ViciousVideos/status/1619140198821990402?ref_src=twsrc%5Etfw%7Ctwcamp%5Etweetembed%7Ctwterm%5E161