ಸಿಂಧನೂರು: ಹಾಸನ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಕ್ಕಳು ಅವರ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ನಾವು ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಹಾಸನ ಟಿಕೆಟ್ ಗಾಗಿ ಭವಾನಿ ರೇವಣ್ಣ ಒತ್ತಡ ವಿಚಾರವಾಗಿ ಹೆಚ್.ಡಿ.ರೇವಣ್ಣ ಹೇಳಿದ ಮೇಲೆ ಅದೇ ಫೈನಲ್. ಎಲ್ಲರೂ ಕುಳಿತು ಮಾತುಕಕತೆ ಮೂಲಕ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ ಅಂದ ಮೇಲೆ ರೇವಣ್ಣ ಹೇಳಿದ್ದೇ ಅಂತಿಮ ಎಂದು ಹೇಳಿದರು.
ಇದೇ ವೇಳೆ ಹಾಸನ ಟಿಕೆಟ್ ವಿಚಾರದಲ್ಲಿ ಶಕುನಿಗಳ ಕೈವಾಡ ಆರೋಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಆ ಶಕುನಿ ಯಾರೆಂದು ಸೂಕ್ತ ಸಮಯದಲ್ಲಿ ತಿಳಿಸುತ್ತೇನೆ ಎಂದರು.
ಜೆಡಿಎಸ್ ಗೆ 20-22 ಸೀಟ್ ಬರುತ್ತೆಂದು ಸಿದ್ದರಾಮಯ್ಯ ನಿತ್ಯ ಜಾಗಟೆ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ನಿತ್ಯ ಜಾಗಟೆ ಹೊಡಿಯುವ ಗಿರಾಕಿ. ಜೆಡಿಎಸ್ ಗೆ ಸಿದ್ಧಾಂತ ಇಲ್ಲ ಎಂದು ಹೇಳಲು, ಇವರು ಅಧಿಕಾರ ಎಲ್ಲಿ ಸಿಗುತ್ತೋ ಅದೇ ನಮ್ಮ ಸಿದ್ಧಾಂತ ಎಂದು ಹೇಳುವವರು. ಸೋತ ಎತ್ತಿನ ಬಾಲ ಹಿಡಿದುಕೊಂಡು ಬರೋದು ಇವರ ಸಿದ್ಧಾಂತ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ಕೊಡುತ್ತೇನೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ವಾಗ್ದಾಳಿ ನಡೆಸಿದರು.