HomeCrimeBIG NEWS: ಕೈ ಹಿಡಿದು ಎಳೆದಾಡಿದ ಯುವಕ; ಮನನೊಂದ ಯುವತಿ ಆತ್ಮಹತ್ಯೆ

BIG NEWS: ಕೈ ಹಿಡಿದು ಎಳೆದಾಡಿದ ಯುವಕ; ಮನನೊಂದ ಯುವತಿ ಆತ್ಮಹತ್ಯೆ

ಅಥಣಿ: ಯುವಕನೊಬ್ಬ ಜಾತ್ರೆಯಲ್ಲಿ ತನ್ನ ಕೈ ಹಿಡಿದು ಎಳೆದಾಡಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದಿದೆ.

19 ವರ್ಷದ ಸ್ವಪ್ನಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ತೋಟದ ಮನೆಯಲ್ಲಿ ಯುವತಿ ಸ್ವಪ್ನಾ ನೇಣಿಗೆ ಶರಣಾಗಿದ್ದಾಳೆ. ಜಾತ್ರೆಯಲ್ಲಿ ಸಂಕೋನಟ್ಟಿ ಗ್ರಾಮದ ಸುನೀಲ್ ಅಣ್ಣಪ್ಪ ಧರಿಗೌಡರ ಎಂಬಾತ ಯುವತಿಯ ಕೈ ಹಿಡಿದು ಎಳೆದಾಡಿದ್ದಾನೆ ಎನ್ನಲಾಗಿದೆ. ಇದೇ ಕಾರಣಕ್ಕೆ ನೊಂದ ಯುವತಿ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುನೀಲ ಜತೆ ವಿವಾಹ ಮಾಡಿಕೊಡುವಂತೆ ಸುನೀಲ ತಂದೆ-ತಾಯಿ ಇತ್ತೀಚೆಗೆ ಯುವತಿಯ ತಂದೆ-ತಾಯಿ ಬಳಿ ಕೇಳಿದ್ದರು. ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ ಎಂದು ಆಕೆಯ ತಂದೆ ಹೇಳಿದ್ದರು. ಈ ಎಲ್ಲಾ ಘಟನೆಗಳ ನಡುವೆ ಊರ ಜಾತ್ರೆಯ ವೇಳೆ ಸುನೀಲ, ಯುವತಿ ಸ್ವಪ್ನಾಳ ಕೈ ಹಿಡಿದು ಬಲವಂತವಾಗಿ ಎಳೆದಾಡಿದ್ದಾನೆ ಎನ್ನಲಾಗಿದೆ. ಇದರಿಂದ ಬೇಸತ್ತ ಸ್ವಪ್ನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular