ಮಂಗಕ್ಕೆ ಆಹಾರ ನೀಡಲು ವಯೋವೃದ್ಧನ ಶತ ಪ್ರಯತ್ನ: ವೈರಲ್​ ವಿಡಿಯೋಗೆ ಜನರು ಫಿದಾ

ಮನುಷ್ಯತ್ವ, ಮಾನವೀಯತೆ ಮರೆಯಾಗುತ್ತಿದೆ ಎಂದು ಎಲ್ಲೆಡೆ ಹೇಳುತ್ತಿರುವ ಈ ಸಮಯದಲ್ಲಿ ವಯೋವೃದ್ಧರೊಬ್ಬರು ಕೋತಿಗೆ ಆಹಾರ ನೀಡಲು ಪ್ರಯತ್ನಿಸುತ್ತಿರುವ ಭಾವುಕ ವಿಡಿಯೋ ಒಂದು ವೈರಲ್​ ಆಗಿದೆ.

ಎತ್ತರದ ಟೆರೇಸ್ ಮೇಲೆ ಕುಳಿತ ಮಂಗಗಳಿಗೆ ರೊಟ್ಟಿ ನೀಡಲು ವಯೋವೃದ್ಧರೊಬ್ಬರು ನೆಲದಿಂದ ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವೈರಲ್ ವಿಡಿಯೋವನ್ನು ಶಿವಂ ಬಾಪಟ್ ಎಂಬ ಬಳಕೆದಾರರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಚಿಕ್ಕ ವಿಡಿಯೋದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ರೊಟ್ಟಿಯ ತುಂಡನ್ನು ಕೋತಿಯ ಕಡೆಗೆ ಎಸೆಯುತ್ತಿದ್ದಾರೆ, ಅವರು ರಸ್ತೆಯಲ್ಲಿ ನಿಂತಿದ್ದರೆ, ಕೋತಿ ಎತ್ತರದಲ್ಲಿ ಬಾಲ್ಕನಿಯ ಮೇಲಿದೆ. ವೃದ್ಧ ವ್ಯಕ್ತಿ ಆಹಾರವನ್ನು ಎರಡು ಅಥವಾ ಮೂರು ಬಾರಿ ಮೇಲೆ ಎಸೆದು ಮಂಗಗಳಿಗೆ ನೀಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ನಂತರ ಬೇರೊಬ್ಬರ ಸಹಾಯದಿಂದ ಮಂಗಗಳಿಗೆ ಅದನ್ನು ನೀಡುವ ವಿಡಿಯೋ ಇದಾಗಿದೆ.‌

ಈ ವೈರಲ್​ ವಿಡಿಯೋಗೆ ಜನರು ಫಿದಾ ಆಗಿದ್ದಾರೆ. ವಯೋವೃದ್ಧ ವ್ಯಕ್ತಿಯ ಈ ಕಾಳಜಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

https://youtu.be/Dsb4n4XKBfE

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read