ರೆಪೋ ದರ ಏರಿಕೆಯ ಕಾರಣ ಬ್ಯಾಂಕುಗಳಲ್ಲಿ ಗೃಹ ಸಾಲದ ಬಡ್ಡಿದರ ಶೇಕಡ 9 ಕ್ಕಿಂತ ಹೆಚ್ಚಾಗಿದ್ದು, ವಾಹನ, ವೈಯಕ್ತಿಕ, ಶಿಕ್ಷಣ ಮೊದಲಾದ ಸಾಲಗಳ ಬಡ್ಡಿ ದರ ಕೂಡ ಹೆಚ್ಚಳವಾಗಿದೆ.
ಇಎಂಐ ಹೊರೆಯಿಂದ ಸಾಲಗಾರರು ತೊಂದರೆಗಳಾಗಿದ್ದು, ಹಣದುಬ್ಬರ ಕಡಿಮೆಯಾಗಿದ್ದರಿಂದ ಇಎಂಐ ಹೊರೆ ಇಳಿಕೆಯಾಗಬಹುದೆಂದು ಕಾಯುತ್ತಿದ್ದಾರೆ. ಇಎಂಐ ಕಡಿಮೆಯಾಗುವ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ.
ಬಡ್ಡಿ ದರ ಇಳಿಕೆಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನಿರಾಕರಿಸಿದ್ದಾರೆ. ಬಡ್ಡಿದರ ಸದ್ಯಕ್ಕೆ ಏರಿಕೆ ಮಾಡುವುದಿಲ್ಲ. ಯಥಾಸ್ಥಿತಿ ಮುಂದುವರೆಯಲಿದೆ. ಹಣದುಬ್ಬರ ಆರ್.ಬಿ.ಐ. ಗುರಿಗೆ ತಕ್ಕಂತೆ ಕಡಿಮೆಯಾಗಿದ್ದರೂ ಬಡ್ಡಿ ದರಗಳಲ್ಲಿ ಯಥಾ ಸ್ಥಿತಿ ಮುಂದುವರೆಯಲಿದೆ. ರೆಪೊ ದರ ಶೇಕಡ 6.25 ರಷ್ಟು ಇದ್ದು, ಸದ್ಯಕ್ಕೆ ಏರಿಕೆಯಾಗದು ಎಂದು ಹೇಳಲಾಗಿದೆ.