alex Certify ‘ಆಲಮಟ್ಟಿ’ ಡ್ಯಾಂ ಸೊಬಗು ಕಣ್ತುಂಬಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಲಮಟ್ಟಿ’ ಡ್ಯಾಂ ಸೊಬಗು ಕಣ್ತುಂಬಿಕೊಳ್ಳಿ

ಆಲಮಟ್ಟಿ ಡ್ಯಾಂ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿದೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿರುವ ಇದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಎಂದು ಕರೆಯಲಾಗುತ್ತದೆ.

ಸಮುದ್ರ ಮಟ್ಟದಿಂದ ಸುಮಾರು 1705 ಅಡಿ ಎತ್ತರದಲ್ಲಿದ್ದು, ಪ್ರಮುಖ ನೀರಾವರಿ ಮತ್ತು ವಿದ್ಯುತ್ ಯೋಜನೆಯಾಗಿದೆ.

ಇಲ್ಲಿನ ಜಲರಾಶಿಯೊಂದಿಗೆ ಉದ್ಯಾನವನದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಪ್ರವಾಸಿಗರಿಗೆ ಹಬ್ಬವೇ ಸರಿ.

ರಾಕ್ ಹಿಲ್ ಕೃತಕ ಅರಣ್ಯ, ಸಂಗೀತ ಕಾರಂಜಿ, ಕಾಡು ಪ್ರಾಣಿಗಳು, ಪಕ್ಷಿಗಳ ಪ್ರತಿರೂಪ ಗ್ರಾಮೀಣ ಜೀವನ ಬಿಂಬಿಸುವ ಪ್ರತಿಮೆಗಳು ಗಮನಸೆಳೆಯುತ್ತವೆ.

ಲವಕುಶರ ಉದ್ಯಾನವನದಲ್ಲಿ ಕಾಲಿಡುತ್ತಿದ್ದಂತೆಯೇ ರಾಮಾಯಣ ಮನದಲ್ಲಿ ಸುಳಿದಾಡುತ್ತದೆ. ಲವಕುಶರ ಬಾಲ್ಯ, ಗುರುಗಳಾದ ವಾಲ್ಮೀಕಿ ಮೊದಲಾದ ಸನ್ನಿವೇಶಗಳ ಪ್ರತಿಕೃತಿಗಳು ಹೊಸ ಲೋಕಕ್ಕೆ ಕರೆದೊಯ್ಯುತ್ತವೆ.

ಕೃಷ್ಣನ ಜೀವನವನ್ನೂ ಇಲ್ಲಿನ ಉದ್ಯಾನದಲ್ಲಿ ಕಾಣಬಹುದು. ಕೃಷ್ಣಾ ನದಿಯ ಪಾತ್ರದಲ್ಲಿ ಕೃಷ್ಣ ಪರಮಾತ್ಮನ ಲೀಲೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಡ್ಯಾಂನ ಅಗಾಧ ಜಲರಾಶಿಯನ್ನು ಕಣ್ತುಂಬಿಕೊಳ್ಳುವ ಜೊತೆಗೆ ಇಲ್ಲಿನ ಸಸ್ಯಕಾಶಿಯಲ್ಲಿ ವಿಹರಿಸಬಹುದಾಗಿದೆ. ಉದ್ಯಾನ, ಸಂಗೀತ ಕಾರಂಜಿ, ದೋಣಿ ವಿಹಾರ ಆಲಮಟ್ಟಿ ಡ್ಯಾಂನ ಸೌಂದರ್ಯವನ್ನು ಹೆಚ್ಚಿಸಿವೆ.

ಇಲ್ಲಿನ ಪರಿಸರದಲ್ಲಿ ಓಡಾಡುವಾಗ, ಮೈಸೂರು ಬೃಂದಾವನ ನೆನಪಿಗೆ ಬರುತ್ತದೆ. ಸಾಧ್ಯವಾದರೆ ಒಮ್ಮೆ ಆಲಮಟ್ಟಿಯ ಸೊಬಗು ನೋಡಿ ಬನ್ನಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...