ಮೈಸೂರಿನ ಉದ್ಬೂರು ಗೇಟ್ ಬಳಿ ಹಾಲಾಳು ಗ್ರಾಮದಲ್ಲಿ 5 ಎಕರೆ ಜಾಗದಲ್ಲಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನಟ ಡಾ. ವಿಷ್ಣುವರ್ಧನ್ ಸ್ಮಾರಕ ನಾಳೆ ಲೋಕಾರ್ಪಣೆಯಾಗಲಿದೆ.
ಜನವರಿ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಮೈಸೂರಿನಲ್ಲಿಯೇ ವಿಷ್ಣುವರ್ಧನ್ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದರು ಚಾಮುಂಡಿಪುರಂನಲ್ಲಿ ವಾಸವಾಗಿದ್ದ ಅವರು ತಮ್ಮ ಚಿತ್ರಗಳ ಚಿತ್ರೀಕರಣ ಮೈಸೂರಿನಲ್ಲಿದ್ದರೆ ಸಂಭ್ರಮಿಸುತಿದ್ದರು. ದೈಹಿಕ ಕಸರತ್ತಿಗೆ ಚಾಮುಂಡಿ ಬೆಟ್ಟ ಹತ್ತಿ ಇಳಿಯುತ್ತಿದ್ದ ಅವರಿಗೆ ಮೈಸೂರು ಚಾಮುಂಡಿ ಬೆಟ್ಟ ನೆಚ್ಚಿನ ತಾಣವಾಗಿತ್ತು. ಅವರ ನೆಚ್ಚಿನ ಊರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಿದ್ದು, ನಾಳೆ ಉದ್ಘಾಟನೆ ಆಗಲಿದೆ.