ನವದೆಹಲಿ: ಪರೀಕ್ಷಾ ಪೇ ಚರ್ಚಾ ಮೂಲಕ ದೇಶದ ಕೋಟ್ಯಂತರ ವಿದ್ಯಾರ್ಥಿಗಳು ನನ್ನ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದೆಹಲಿಯ ಟಾಲ್ಕಟೊರಾ ಸ್ಟೇಡಿಯಂ ನಲ್ಲಿ ನಡೆದ ಪರೀಕ್ಷಾ ಪೇ ಚರ್ಚಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರೊಂದಿಗೆ ಸಂವಾದ ಕಾರ್ಯಕ್ರಮದ 6ನೇ ಆವೃತ್ತಿಯಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ವಿದ್ಯಾರ್ಥಿಗಳು ಇಂದು ನನ್ನ ಪರೀಕ್ಷೆ ಮಾಡುತ್ತಿದ್ದಾರೆ. ಇದು ನನಗೆ ಸಂತಸದ ವಿಚಾರ. ನನ್ನ ದೇಶದ ಯುವ ಮನಸ್ಸುಗಳು ಏನನ್ನು ಯೋಚಿಸುತ್ತಿವೆ ಎಂದು ತಿಳಿಯಲು, ಸರ್ಕಾರದಿಂದ ಅವರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ಅರಿಯಲು ನನಗೆ ಅತ್ಯುತ್ತಮವಾದ ಅವಕಾಶ ಸಿಕ್ಕಿದೆ ಎಂದರು.
ಪರೀಕ್ಷಾ ಪೇ ಚರ್ಚಾದಲ್ಲಿ ಬರುವ ಎಲ್ಲಾ ಪ್ರಶ್ನೆಗಳಿಗೂ ಮುಂದಿನ ದಿನಗಳಲ್ಲಿ ಸಮಾಜ ವಿಜ್ಞಾನಿಗಳು ವಿಶ್ಲೇಷಿಸಲಿದ್ದಾರೆ ಎಂದು ತಿಳಿಸಿದರು. ಪರೀಕ್ಷಾ ಪೇ ಚರ್ಚಾ ನನ್ನ ಪರೀಕ್ಷೆಯೂ ಆಗಿದೆ ಎಂದು ಹೇಳಿದರು.
ಪರೀಕ್ಷಾ ಒತ್ತಡಗಳ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತರಿಸಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುವುದು ಸರಿಯಲ್ಲ, ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರೀಕ್ಷೆ ಇರಬೇಕು. ಮಕ್ಕಳ ಸಾಮರ್ಥ್ಯದದ ಬಗ್ಗೆ ನೀವು ಸದಾ ಗಮನ ಹರಿಸಬೇಕು. ನಾವೂ ರಾಜಕೀಯದಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳ ಮೇಲೆ ಭಾರಿ ಒತ್ತಡ ಹಕುತ್ತೇವೆ ಎಂದು ಹೇಳಿದರು.