HomeKarnatakaBIG NEWS: KMFನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ; ನಿರ್ಮಾಪಕ ಪ್ರಕಾಶ್ ಅರೆಸ್ಟ್

BIG NEWS: KMFನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ; ನಿರ್ಮಾಪಕ ಪ್ರಕಾಶ್ ಅರೆಸ್ಟ್

ಬೆಂಗಳೂರು: ಕೆ ಎಂ ಎಫ್ ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆಯ ಉದ್ಯೋಗ ಕೊಡಿಸುವುದಾಗಿ ಹೇಳಿ ಚಿತ್ರ ನಿರ್ಮಾಕರೊಬ್ಬರು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಪ್ರಕಾಶ್ ಅವರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಕೆ.ಎಂ.ಎಫ್ ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುತೇನೆ ಎಂದು ಹೇಳಿ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯಿಂದ ಪ್ರಕಾಶ್, 10 ಲಕ್ಷ ರೂಪಾಯಿ ಹಣ ಪಡೆದಿದ್ದರು. ಬಳಿಕ ವ್ಯಕ್ತಿಗೆ ನಕಲಿ ನೇಮಕಾತಿ ಆದೇಶ ಪ್ರತಿ ನೀಡಿ ವಂಚಿಸಿದ್ದಾರೆ ಎನ್ನಲಾಗಿದೆ.

ಆದೇಶ ಪ್ರತಿ ಪಡೆದ ವ್ಯಕ್ತಿ ಕೆ.ಎಂ.ಎಫ್ ಕಚೇರಿಗೆ ತೆರಳಿದ್ದಾಗ ಪ್ರಕರಣ ಬಹಿರಂಗವಾಗಿದೆ. ನಿರ್ಮಾಪಕ ಪ್ರಕಾಶ್ ಕೆ.ಎಂ.ಎಫ್ ನಿರ್ದೇಶಕರು ಹಾಗೂ ಅಧಿಕಾರಿಗಳ ಸಹಿಯನ್ನೂ ನಕಲಿ ಮಾಡಿರುವುದು ಬೆಳಕಿಗೆ ಬಂಧಿದೆ. ಪ್ರಕರಣ ಸಂಬಂಧ ನಿರ್ಮಾಪಕ ಪ್ರಕಾಶ್ ಅವರನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular