alex Certify BIG NEWS: ರಾಹುಲ್ ಗಾಂಧಿ ರಾಜಕೀಯ ಇಮೇಜ್ ಬದಲಿಸಿದ ‘ಭಾರತ್ ಜೋಡೋ ಯಾತ್ರೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಹುಲ್ ಗಾಂಧಿ ರಾಜಕೀಯ ಇಮೇಜ್ ಬದಲಿಸಿದ ‘ಭಾರತ್ ಜೋಡೋ ಯಾತ್ರೆ’

ರಾಹುಲ್ ಗಾಂಧಿಗೆ ರಾಜಕೀಯ ಇಮೇಜ್ ಅನ್ನು ಮರುನಿರ್ಮಾಣ ಮಾಡಲು ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದೆ

ಕಾಲ್ನಡಿಗೆಯಲ್ಲಿ ಐದು ತಿಂಗಳುಗಳು ಕೈಗೊಂಡಿದ್ದ ಭಾರತ್ ಜೋಡೋ ಯಾತ್ರೆ ಅತ್ಯಂತ ಪ್ರಸಿದ್ಧ ರಾಜಕೀಯ ವಂಶದ ಕುಡಿ ತನ್ನ ಪ್ಲೇಬಾಯ್ ಇಮೇಜ್ ಅನ್ನು ಕಳಚಲು ಸಹಾಯ ಮಾಡಿದೆ. ಆದರೆ, ಅವರ ನಿರಾಶಾದಾಯಕ ರಾಜಕೀಯ ಅದೃಷ್ಟ ಪುನರುಜ್ಜೀವನಗೊಳಿಸುವ ಹಾದಿ ಕಠಿಣ ಪ್ರಯಾಣವಾಗಿದೆ.

ಬಿಜೆಪಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಕಾರ್ಯತಂತ್ರ, ಸವಾಲು ಎದುರಿಸಲು ರಾಹುಲ್ ಗಾಂಧಿ ವರ್ಷಗಳಿಂದ ಹೆಣಗಾಡುತ್ತಿದ್ದಾರೆ.

75 ವರ್ಷಗಳ ಹಿಂದೆ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಪಕ್ಷ ಈಗ ಆಂತರಿಕ ಕಲಹ ಮತ್ತು ಪಕ್ಷಾಂತರಗಳಿಂದ ನಲುಗಿದೆ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೈಗೊಂಡ ಯಾತ್ರೆ ಪಕ್ಷಕ್ಕೆ ಹೊಸ ಚೈತನ್ಯ, ಹುಮ್ಮಸ್ಸನ್ನು ತರುವ ಜೊತೆಗೆ ರಾಹುಲ್ ಗಾಂಧಿ ಇಮೇಜ್ ಬದಲಿಸಿದೆ.

ಸಾರ್ವಜನಿಕ ಜೀವನದಲ್ಲಿ ಇದುವರೆಗೆ ತಪ್ಪಿಸಿಕೊಂಡಿದ್ದ ಅಧಿಕಾರದ ಗಾಳಿಯನ್ನು ಭಾರತ್ ಜೋಡೋ ಯಾತ್ರೆ ನೀಡಿದೆ. ರಾಹುಲ್ ಅಸಮರ್ಥ ವ್ಯಕ್ತಿ ಎಂಬ ಬಿಜೆಪಿಯ ಪ್ರಚಾರವನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಪಾರ್ಸಾ ವೆಂಕಟೇಶ್ವರ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಅವರ ಸುದೀರ್ಘ ಯಾತ್ರೆ ಭಾರತದ ದಕ್ಷಿಣ ತುದಿಯಲ್ಲಿ ಪ್ರಾರಂಭವಾದಾಗಿನಿಂದ, ರಾಹುಲ್ ಗಾಂಧಿಯವರ ಮೆರವಣಿಗೆಯನ್ನು ವೀಕ್ಷಿಸಲು ಬೀದಿಗಳಲ್ಲಿ ಸಾಲುಗಟ್ಟಿದ್ದ ಸಾವಿರಾರು ಪ್ರೇಕ್ಷಕರೊಂದಿಗೆ ಸಮರ್ಥ ಭಾಷಣಗಳು ಮತ್ತು ಆತ್ಮೀಯ ಸಂವಾದಗಳಿಂದ ಮನ್ನಣೆ ಪಡೆದಿದ್ದಾರೆ.

ಅವರ 3,500 ಕಿಲೋಮೀಟರ್ ಕಾಲ್ನಡಿಗೆ ಮಹತ್ವದ ಬೆಳವಣಿಗೆಯಾಗಿದೆ. ಕಾಶ್ಮೀರದ ತಪ್ಪಲಿನಲ್ಲಿ ಸೋಮವಾರ ಯಾತ್ರೆ ಮುಕ್ತಾಯಗೊಳ್ಳುತ್ತದೆ. ಭಾರತ ಸ್ವಾತಂತ್ರ್ಯದ ನಂತರದ ಮೊದಲ ಅರ್ಧ ಶತಮಾನದಲ್ಲಿ ಕಾಂಗ್ರೆಸ್ ಪ್ರಬಲವಾಗಿತ್ತು. ಆದರೆ, ಈಗ ಭಾರತದ 28 ರಾಜ್ಯಗಳಲ್ಲಿ ಕೇವಲ ಮೂರರಲ್ಲಿ ಆಡಳಿತ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿಯನ್ನು ಅವರ ತಂದೆ, ಅಜ್ಜಿ ಮತ್ತು ಮುತ್ತಜ್ಜನ ಪರಂಪರೆಗೆ ಹೆಚ್ಚು ವಿಶ್ವಾಸಾರ್ಹ ಉತ್ತರಾಧಿಕಾರಿಯಾಗಿ ರೂಪಿಸಿದೆ, ರಾಹುಲ್ ಅವರು ತಮ್ಮ ಸಾರ್ವಜನಿಕ ಇಮೇಜ್ ಅನ್ನು ಮರು ವ್ಯಾಖ್ಯಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮತಗಳಾಗಿ ಪರಿವರ್ತನೆಗೆ ಕಾರಣವಾಗುತ್ತದೆಯೇ ಎನ್ನುವುದು ಖಚಿತವಾಗಿಲ್ಲ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...