alex Certify ಗ್ರಾಹಕರೇ ಗಮನಿಸಿ: ಜ. 30 ರಿಂದ ಎರಡು ದಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರೇ ಗಮನಿಸಿ: ಜ. 30 ರಿಂದ ಎರಡು ದಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ನವದೆಹಲಿ: ಬ್ಯಾಂಕ್ ಯೂನಿಯನ್‌ ಗಳು ತಮ್ಮ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಎರಡು ದಿನಗಳ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಜನವರಿ 30 ಮತ್ತು 31 ರಂದು ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಆದರೆ, ಶುಕ್ರವಾರ ಭಾರತೀಯ ಬ್ಯಾಂಕ್‌ ಗಳ ಸಂಘವು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್‌ಬಿಯು) ನೊಂದಿಗೆ ಸಂಧಾನ ಸಭೆ ನಡೆಸಿದ ನಂತರ ಮುಷ್ಕರದ ಸ್ಥಿತಿ ತಿಳಿಯಲಿದೆ. ಜನವರಿ 24 ರಂದು ಮುಂಬೈನಲ್ಲಿ ನಡೆದ ಇದೇ ರೀತಿಯ ಸಭೆಯು ಯಾವುದೇ ಪ್ರಗತಿ ಸಾಧಿಸಲು ವಿಫಲವಾಗಿದೆ.

ಜನವರಿ 30-31 ರಂದು ಎರಡು ದಿನಗಳ ಮುಷ್ಕರ ನಿರ್ಧಾರವು ಇನ್ನೂ ಅಂತಿಮಗೊಂಡಿಲ್ಲ ಎಂದು ಹೇಳಲಾಗಿದೆ.

ಏತನ್ಮಧ್ಯೆ, ಜನವರಿ 24 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಜನವರಿ 30-31 ರಂದು ಯೂನಿಯನ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಕರೆದಿರುವ ಎರಡು ದಿನಗಳ ಅಖಿಲ ಭಾರತ ಮುಷ್ಕರದಿಂದಾಗಿ ತನ್ನ ಶಾಖೆಗಳಲ್ಲಿ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಸ್ಟಾಕ್ ಎಕ್ಸ್ಚೇಂಜ್ ಗಳಿಗೆ ತಿಳಿಸಿದೆ.

“ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್(UFBU) ಮುಷ್ಕರದ ಸೂಚನೆಯನ್ನು ನೀಡಿದೆ ಎಂದು ಭಾರತೀಯ ಬ್ಯಾಂಕ್‌ಗಳ ಅಸೋಸಿಯೇಷನ್ (IBA) ನಮಗೆ ಸಲಹೆ ನೀಡಿದೆ, UFBU ನ ಘಟಕ ಒಕ್ಕೂಟಗಳಾದ AIBEA, AIBOC, NCBE, AIBOA, BEFI, INBEF ಮತ್ತು INBOC ಗಳು ತಮ್ಮ ಬೇಡಿಕೆಗಳನ್ನು ಬೆಂಬಲಿಸಿ 2023 ರ ಜನವರಿ 30 ಮತ್ತು 31 ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ನಡೆಸಲು ಪ್ರಸ್ತಾಪಿಸಿವೆ ಎಂದು ಎಸ್‌ಬಿಐ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...