ಭಾರತದ ಯುವ ಕ್ರಿಕೆಟಿಗ ಶುಭಮನ್ ಗಿಲ್ ಈಗ ಎಲ್ಲರ ಫೇವರಿಟ್. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸಾಲು ಸಾಲು ಶತಕ ಬಾರಿಸಿ ಮಿಂಚಿದ್ದಾರೆ ಈ ಸ್ಟಾರ್ ಬ್ಯಾಟ್ಸ್‌ಮನ್. ಶುಭಮನ್ ಗಿಲ್ ಕಿವೀಸ್ ಬೌಲರ್ ಗಳನ್ನು ಸದೆಬಡಿದಿದ್ದಾರೆ. ಈ ಮೂರು ಪಂದ್ಯಗಳ ಸರಣಿಯಲ್ಲಿ ಗಿಲ್, ಒಂದು ಶತಕ ಮತ್ತು ದ್ವಿಶತಕ ಸೇರಿದಂತೆ 360 ರನ್ ಗಳಿಸಿದ್ದಾರೆ.
ಶುಬ್‌ಮನ್ ಗಿಲ್‌ರ ಪ್ರದರ್ಶನವನ್ನು ನೋಡ್ತಾ ಇದ್ರೆ ಅವರೊಬ್ಬ ಶ್ರೇಷ್ಠ ಆಟಗಾರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಕಳೆದ 18 ಇನ್ನಿಂಗ್ಸ್‌ಗಳಲ್ಲಿ 6 ಅರ್ಧ ಶತಕ, 4 ಶತಕ ಮತ್ತು ದ್ವಿಶತಕದ ಸಹಾಯದಿಂದ 1204 ರನ್ ಗಳಿಸಿದ್ದಾರೆ. 23ರ ಹರೆಯದ ಈ ಕ್ರಿಕೆಟಿಗ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದ್ದಾರೆ. ಅಷ್ಟಕ್ಕೂ ಈ ಅದ್ಭುತ ಬ್ಯಾಟಿಂಗ್ ಹಿಂದಿರುವ ಸೀಕ್ರೆಟ್ ಏನು? ಶುಭಮನ್ ಗಿಲ್‌ರ ಫಿಟ್ನೆಸ್ ರಹಸ್ಯವೇನು ಅನ್ನೋದನ್ನು ನೋಡೋಣ.
ಜಿಮ್ಮಿಂಗ್: ಶುಭಮನ್ ಗಿಲ್ ನಿಯಮಿತವಾಗಿ ಜಿಮ್‌ನಲ್ಲಿ ವರ್ಕೌಟ್ ಮಾಡ್ತಾರೆ. ಕಠಿಣ ತಾಲೀಮು ನಡೆಸ್ತಾರೆ. ಸ್ವತಃ ತಾವೇ ಜಿಮ್‌ನಲ್ಲಿ ನಾನಾ ಕಸರತ್ತು ಮಾಡುವ ಮೂಲಕ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ.
ವ್ಯಾಯಾಮದಲ್ಲಿ ವ್ಯತ್ಯಾಸ: ಶುಭಮನ್ ಗಿಲ್ ವ್ಯಾಯಾಮದ ಬಗ್ಗೆ ಹೆಚ್ಚಿನ ಗಮನಹರಿಸುತ್ತಾರೆ. ಡಂಬ್ಬೆಲ್ಸ್, ಚೆಸ್ಟ್ ಪ್ರೆಸ್ ಮುಂತಾದ ಅನೇಕ ರೀತಿಯ ವರ್ಕ್‌ಔಟ್‌ಗಳಿಗೆ ಒತ್ತು ನೀಡುತ್ತಾರೆ.
ಕಟ್ಟುನಿಟ್ಟಾದ ದಿನಚರಿ: ಕ್ರಿಕೆಟ್‌ನಲ್ಲಿ ಫಾರ್ಮ್ ಕಾಯ್ದುಕೊಳ್ಳಬೇಕಂದ್ರೆ ಫಿಟ್ನೆಸ್ ಕೂಡ ಬಹಳ ಮುಖ್ಯ. ಹಾಗಾಗಿ ಶುಭಮನ್ ಗಿಲ್ ತುಂಬಾ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾರೆ. ಶಿಸ್ತು ಮತ್ತು ಆರೋಗ್ಯದ ಬಗ್ಗೆ ಸರಿಯಾದ ಕಾಳಜಿಯಿದ್ದಾಗ ಜೀವನಕ್ರಮವು ಪರಿಣಾಮಕಾರಿಯಾಗಿರುತ್ತದೆ ಎನ್ನುತ್ತಾರೆ ಅವರು.
ತೂಕದ ಬಗ್ಗೆ ಗಮನ: ನಮ್ಮ ನೆಚ್ಚಿನ ಆಹಾರವನ್ನು ಸಾಂದರ್ಭಿಕವಾಗಿ ಸೇವಿಸುವುದು ಸಹಜ. ಆದರೆ ತೂಕದ ಬಗ್ಗೆಯೂ ಕಾಳಜಿ ವಹಿಸಿ ಅನ್ನೋದು ಶುಭಮನ್ ಸಲಹೆ. ಇದನ್ನವರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ರಜಾದಿನಗಳಲ್ಲಿ ಚೀಟ್ ಮೀಲ್‌ಗಳಿಂದ ಹೆಚ್ಚಾದ ತೂಕವನ್ನು ಇಳಿಸಲು ಸಾಕಷ್ಟು ಕಸರತ್ತು ಮಾಡ್ತಾರೆ.
ತಾಲೀಮು: ಕ್ರಿಕೆಟ್‌ನಲ್ಲಿ ಯಶಸ್ಸು ಪಡೆಯಲು ಅಭ್ಯಾಸ ಬಹಳ ಮುಖ್ಯ. ಹಾಗಾಗಿ ಶುಭಮನ್ ತಾಲೀಮು ತಪ್ಪಿಸುವುದೇ ಇಲ್ಲ. ತಾವೇ ಸ್ವತಃ ಬ್ಯಾಟಿಂಗ್ ಕಲೆಗಳನ್ನು ಕರಗತ ಮಾಡಿಕೊಳ್ತಾರೆ.