ಟೆಲಿಕಾಂ ಸಂಸ್ಥೆ ಯಲ್ಲಿ ದೊಡ್ಡ ಕಂಪನಿ ಏರ್ ಟೆಲ್. ಏರ್ ಟೆಲ್ ರೀಚಾರ್ಜ್ ಸೇರಿದಂತೆ ಬೇರೆ ಬೇರೆ ಸಿಮ್ ಗಳ ರೀಚಾರ್ಜ್ ದರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಕಳೆದ ವರ್ಷ ಏರ್ ಟೆಲ್ ನ ಕನಿಷ್ಠ ರೀಚಾರ್ಜ್ ದರ ಕೂಡ ಏರಿಕೆಯಾಗಿತ್ತು. 99 ಇದ್ದ ದರ 155 ಕ್ಕೆ ಏರಿಕೆ ಕಂಡಿತ್ತು. ಕೆಲವು ರಾಜ್ಯಗಳಲ್ಲಿ ಮಾತ್ರ ಈ ದರ ಜಾರಿಯಾಗಿತ್ತು. ಇದನ್ನು ಈಗ ವಿಸ್ತರಣೆ ಮಾಡಲಾಗಿದೆ.
ಹೌದು, ಹರಿಯಾಣ, ಒಡಿಶಾದಲ್ಲಿ ಜಾರಿ ಮಾಡಿದ್ದ ದರವನ್ನು ಇದೀಗ ಆಂಧ್ರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಕರ್ನಾಟಕ, ರಾಜಸ್ಥಾನ ಮತ್ತು ಉತ್ತರ ಪ್ರದೇಶ, ಈಶಾನ್ಯ ಸೇರಿ 7 ರಾಜ್ಯಗಳಲ್ಲಿ ವಿಸ್ತರಿಸಿದೆ ಈ ಕಂಪನಿ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಅನುಷ್ಠಾನಕ್ಕೆ ತರಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಈ ದರವೇ ಇರಲಿದೆ.
ಇನ್ನು ಈ ಹೊಸ ದರದಲ್ಲಿ ಮೊದಲಿದ್ದ 99 ರೂ. ರೀಚಾರ್ಜ್ ಯೋಜನೆ 28 ದಿನಗಳ ಅವಧಿಗೆ ಇತ್ತು. ಜೊತೆಗೆ 1 ಜಿಬಿ ಡೇಟಾ, 300 ಸಂದೇಶಗಳು ಮತ್ತು ಪ್ರತಿ ಕರೆಯ ನಿಮಿಷಕ್ಕೆ 2.5 ರೂಪಾಯಿ ದರ ಆಗಲಿತ್ತು. ಬದಲಾಯಿಸಿದ ದರದಲ್ಲಿ 155 ರೂ.ಗೆ ಕರೆಗಳನ್ನು ಅನಿಮಿಯತ ಇದೆ. ಉಳಿದಂತೆ ಅದೇ ಸೌಲಭ್ಯಗಳು ಮುಂದುವರಿಯಲಿವೆ.