ಚಳಿಗಾಲದಲ್ಲಿ ಸಾಮಾನ್ಯವಾಗಿ ಜನರು ಸಿಹಿ ತಿಂಡಿಯನ್ನು ಇಷ್ಟಪಡ್ತಾರೆ. ಸಿಹಿ ಎಂದಾಗ ಮೊದಲು ನೆನಪಾಗೋದು ಕ್ಯಾರೆಟ್ ಹಲ್ವಾ. ಆದ್ರೆ ಈ ಬಾರಿ ಹಲ್ವಾ ಬದಲು ಕ್ಯಾರೆಟ್ ಖೀರ್ ಮಾಡಿ.
ಕ್ಯಾರೆಟ್ ಖೀರ್ ಮಾಡಲು ಬೇಕಾಗುವ ಪದಾರ್ಥ :
ಕ್ಯಾರೆಟ್ : ಅರ್ಧ ಕೆ.ಜಿ
ಸಕ್ಕರೆ : ರುಚಿಗೆ ತಕ್ಕಷ್ಟು
ಹಾಲು : ಅರ್ಧ ಲೀಟರ್
ತುಪ್ಪ: ಎರಡು ಚಮಚ
ಗೋಡಂಬಿ : ಒಂದು ಕಪ್
ಬಾದಾಮಿ : 10-15
ಏಲಕ್ಕಿ : 2
ಕ್ಯಾರೆಟ್ ಖೀರ್ ಮಾಡುವ ವಿಧಾನ :
ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಬಿಸಿ ಮಾಡಿದ ತುಪ್ಪಕ್ಕೆ ಸಕ್ಕರೆ ಹಾಗೂ ತುರಿದ ಕ್ಯಾರೆಟ್ ಹಾಕಿ. ಇದಾದ್ಮೇಲೆ 2ರಿಂದ 5 ನಿಮಿಷ ಬೇಯಿಸಿ. ನಂತ್ರ ಹಾಲು ಸೇರಿಸಿ ಕಡಿಮೆ ಉರಿಯಲ್ಲಿ ಸುಮಾರು 20 ನಿಮಿಷ ಬೇಯಿಸಿ.
ಎಲ್ಲವೂ ಬೆಂದ ಮೇಲೆ ಏಲಕ್ಕಿ ಹುಡಿ ಹಾಕಿ. ತುಪ್ಪದಲ್ಲಿ ಒಣ ದ್ರಾಕ್ಷಿ, ಗೋಡಂಬಿ ಹಾಕಿ ಹುರಿದು ಮಿಶ್ರಣಕ್ಕೆ ಹಾಕಿದ್ರೆ ಕ್ಯಾರೆಟ್ ಖೀರ್ ಸಿದ್ಧ.
You Might Also Like
TAGGED:carrot kheer