ಪತ್ನಿಯ ಅಶ್ಲೀಲ ಫೋಟೋ ಹಾಕುವುದಾಗಿ ಪತಿಗೆ ಬೆದರಿಕೆ; 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟ ಅಪರಿಚಿತ

ತನ್ನ ಪತ್ನಿಯ ಅಶ್ಲೀಲ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿ ಕರೆ ಮಾಡಿದ ಅನಾಮಧೇಯ ವ್ಯಕ್ತಿಯ ವಿರುದ್ಧ ಮುಂಬೈನ ಬಯಂದರ್, ವ್ಯಕ್ತಿಯೊಬ್ಬರು ನವಘರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ತನ್ನ ಪತ್ನಿಯ ಫೋನ್ ಅನ್ನು ಯಾರೋ ಹ್ಯಾಕ್ ಮಾಡಿದ ನಂತರ ಫೋಟೋಗಳು ಸೋರಿಕೆಯಾಗಿವೆ ಎಂದು ದೂರುದಾರರು ಹೇಳಿದ್ದಾರೆ.

ಫೋಟೋಗಳನ್ನು ಪೋಸ್ಟ್ ಮಾಡದೇ ಇರಲು ಕರೆ ಮಾಡಿದ ವ್ಯಕ್ತಿ 5 ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದಾನೆ. ಈ ಬಗ್ಗೆ ದೂರುದಾರರು ತಮ್ಮ ಪತ್ನಿಯನ್ನು ಪ್ರಶ್ನಿಸಿದ್ದು, ಆಕೆ ತಾನು ಯಾರಿಗೂ ಫೋಟೋಗಳನ್ನು ಕಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಂತರ ಅವರು ದೂರು ದಾಖಲಿಸಿದ್ದು, ನವಘರ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 385 (ಸುಲಿಗೆ), 500 (ಮಾನನಷ್ಟ) 504 (ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆ) ಜೊತೆಗೆ ಐಟಿ ಕಾಯ್ದೆಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read