ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಚಿಕ್ಕ ಬಾಲಕನೊಬ್ಬ ಸಾಕು ನಾಯಿಯೊಂದಿಗೆ ಬೇಸ್ಬಾಲ್ ಆಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ಮೂಲಕ ಅವರು ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ.
ಗೆಳೆಯರು ಎಷ್ಟು ಇದ್ದಾರೆ ಎನ್ನುವುದು ಮುಖ್ಯವಲ್ಲ, ಬದಲಿಗೆ ಇರುವ ಒಬ್ಬನೇ ಗೆಳೆಯ ಎಷ್ಟು ನಂಬಿಗಸ್ತ, ನಂಬಲು ಅರ್ಹ, ವಿಶ್ವಾಸಕ್ಕೆ ಆತ ಅರ್ಹ ಎನ್ನುವುದು ಈ ವಿಡಿಯೋ ತೋರಿಸುತ್ತದೆ. ಯಾವಾಗಲೂ ದೊಡ್ಡ ಸ್ನೇಹಿತರ ವಲಯವನ್ನು ಹೊಂದಿರಬೇಕು ಎನ್ನುವುದು ಸರಿಯಲ್ಲ. ಸಂಖ್ಯೆಗಳು ಅಪ್ರಸ್ತುತವಾಗುತ್ತದೆ, ಇದಕ್ಕೆ ಈ ವಿಡಿಯೋನೇ ಸಾಕ್ಷಿ ಎಂದು ಅವರು ಹೇಳಿದ್ದಾರೆ.
ಈ ವೈರಲ್ ವಿಡಿಯೋದಲ್ಲಿ ಬಾಲಕನೊಬ್ಬ ರಾಡ್ನ ಮೇಲೆ ಚೆಂಡನ್ನು ಜೋಡಿಸಿ ಬೇಸ್ಬಾಲ್ ಬ್ಯಾಟ್ನಿಂದ ಹೊಡೆಯುವುದನ್ನು ನೋಡಬಹುದು. ಅವನ ಮುದ್ದಿನ ನಾಯಿ ಅದನ್ನು ನೋಡಿ ಚೆಂಡಿನ ಹಿಂದೆ ಓಡಿ ಬಂದು ಅದನ್ನು ತಂದು ಹುಡುಗನ ಬಳಿಗೆ ತರುತ್ತದೆ. ಅವರ ಸೌಹಾರ್ದತೆ ನೋಡಿ ಸಂಪೂರ್ಣ ಹೃದಯಸ್ಪರ್ಶಿಯಾಗಿದೆ.
“ಜೀವನವನ್ನು ಆನಂದಿಸಲು ನಮಗೆ ದೊಡ್ಡ ಗುಂಪುಗಳ ಅಗತ್ಯವಿಲ್ಲ, ಕೇವಲ 1-2 ನಿಜವಾದ ಸ್ನೇಹಿತರು ಸಾಕಷ್ಟು ಹೆಚ್ಚು” ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.