ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಕಾರ್ ಪಾರ್ಕ್ ಮಾಡಿ ರಸ್ತೆಯಲ್ಲೇ ಕುಣಿಯುವ, ರೀಲ್ಸ್ ಮಾಡುವ ಪ್ರಕರಣ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಬ್ಯುಸಿ ಇರುವ ರಸ್ತೆಗಳಲ್ಲಿ ಹೀಗೆ ಮಾಡಿದರೆ ಅಪಘಾತಗಳು ಸಂಭವಿಸೋದು ಗ್ಯಾರಂಟಿ. ಇದೀಗ ಇಲ್ಲೊಬ್ಬ ಯುವತಿ ಎಲಿವೇಟೆಡ್ ರಸ್ತೆಯಲ್ಲಿ ಕುಣಿಯೋ ಮೂಲಕ ಸುದ್ದಿಯಾಗಿದ್ದಾಳೆ. ಅಷ್ಟೆ ಅಲ್ಲ ಪೊಲೀಸರು ಈಕೆಗೆ ದಂಡವನ್ನೂ ವಿಧಿಸಿದ್ದಾರೆ.
ಹೌದು, ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ದೆಹಲಿಯಿಂದ ರಾಜ್ ನಗರ ವಿಸ್ತರಣೆಗೆ ಸಂಪರ್ಕಿಸುವ ಎಲಿವೇಟೆಡ್ ರಸ್ತೆಯಲ್ಲಿ ಡಾನ್ಸ್ ಮಾಡಿದ್ದಾಳೆ. ಇನ್ನು ಅವಳ ಕಾರ್ ಕೂಡ ಅಲ್ಲೇ ಪಾರ್ಕ್ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಪೊಲೀಸರ ಗಮನಕ್ಕೆ ಬರ್ತಾ ಇದ್ದ ಹಾಗೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
ಸಂಚಾರ ಪೊಲೀಸರು ಈ ಯುವತಿಗೆ 17 ಸಾವಿರ ದಂಡ ವಿಧಿಸಿದ್ದಾರೆ. ಆಕೆಯ ವಿರುದ್ಧವೂ ಕೇಸ್ ದಾಖಲು ಮಾಡಿದ್ದಾರೆ. ಎಲಿವೇಟೆಡ್ ರಸ್ತೆಯಲ್ಲಿ ಈ ರೀತಿ ಮಾಡಬೇಡಿ ಅಂತ ಎಷ್ಟು ಬಾರಿ ಪೊಲೀಸರು ಹೇಳಿದರೂ ಇದೇ ಘಟನೆಗಳು ಮತ್ತೆ ಮುಂದುವರೆಯುತ್ತಿವೆ. ಜೊತೆಗೆ ಅನೇಕ ಕ್ರಮ ವಹಿಸಿದರೂ ಜನ ಇನ್ನೂ ಬದಲಾಗಿಲ್ಲ ಅಂತಿದ್ದಾರೆ ಅಲ್ಲಿನ ಪೊಲೀಸರು. ಈ ರಸ್ತೆಗಳಲ್ಲಿ ವಾಹನದ ವೇಗ ಹೆಚ್ಚಾಗಿರೋದ್ರಿಂದ ಈ ರೀತಿ ಮಧ್ಯ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ಅಪಘಾತಗಳು ಉಂಟಾಗುತ್ತವೆ.