BIG NEWS: ತ್ರಿಶೂಲ ಹಿಡಿದು ಹೋರಾಟ ಮಾಡಿ ಯಾವ ಮಂತ್ರಿ ಮಗನೂ ಬಲಿಯಾಗುತ್ತಿಲ್ಲ; ಬಡವರ ಮಕ್ಕಳು ಸಾಯುತ್ತಿದ್ದಾರೆ; ಡಿ.ಕೆ.ಶಿವಕುಮಾರ್ ಆಕ್ರೋಶ

ಉಡುಪಿ: ಬಿಜೆಪಿ ನಾಯಕರು ಹಿಂದುತ್ವ ದ್ವೇಷದ ರಾಜಕಾರಣದ ಹೆಸರಲ್ಲಿ ಬಡವರ ಮಕ್ಕಳನ್ನು ಸಾಯಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ತ್ರಿಶೂಲ ಹಿಡಿದು ಹೋರಾಟ ಮಾಡಿ ಸಾಯುತ್ತಿದ್ದಾರೆ. ಯಾವ ಮಂತ್ರಿ ಮಗನೂ ಬಲಿಯಾಗಲ್ಲ, ಬಡವರ ಮಕ್ಕಳು ಸಾಯುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.

ಉಡುಪಿಯಲ್ಲಿ ಬಸ್ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್, ಯಾವ ಮಂತ್ರಿ ಮಕ್ಕಳೂ ಇಂದು ಬಲಿಯಾಗುತ್ತಿಲ್ಲ, ತ್ರಿಶೂಲ ಹಿಡಿದು ಹೋರಾಟ ಮಾಡಿ ಬಡವರ ಮಕ್ಕಳು ಸಾಯುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಎಲ್ಲರೂ ಉತ್ತರ ಕೊಡಲಿ ಎಂದು ಒತ್ತಾಯಿಸಿದರು.

ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಿದ್ದಾರೆ. ಆದರೆ ಯಾವ ಮಾತುಗಳನ್ನು ಉಳಿಸಿಕೊಂಡಿದ್ದಾರೆ? ಗ್ಲೋಬಲ್ ಹೂಡಿಕೆ ದಾರರ ಸಮಾವೇಶದಲ್ಲಿ ಕರಾವಳಿಗೆ ಸಿಕ್ಕಿದ್ದೇನು? ಮೀನುಗಾರರಿಗೆ ಸೀಮೆ ಎಣ್ಣೆ ಸರಿಯಾಗಿ ಕೊಡುತ್ತಿಲ್ಲ. ಕರಾವಳಿ ಭಾಗದಲ್ಲಿ ಹೂಡಿಕೆಗೆ ಯಾರೂ ಸಿದ್ಧರಾಗುತ್ತಿಲ್ಲ. ಕಾರಣ ಕೋಮು ಗಲಭೆ ವಿಷ ಬೀಜ ಬಿತ್ತಿ ದ್ವೇಷದ ರಾಜಕಾರಣ ಮಾಡಿಸುತ್ತಿದ್ದಾರೆ. ಒಂದು ಕಾಲದಲ್ಲಿ ಶಿಕ್ಷಣದಲ್ಲಿ ಮೊದಲ ಸ್ಥಾನದಲ್ಲಿದ್ದ ಉಡುಪಿ ಇಂದು ಹಿಂದೆ ಬಿದ್ದಿದೆ. ಕರಾವಳಿ ಭಾಗದಲ್ಲಿ ಮಕ್ಕಳು ವಿದ್ಯಾಭ್ಯಾಸ, ಶಿಕ್ಷಣಕ್ಕೆ ಬರುತ್ತಿಲ್ಲ. ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read