ಮಂಗಳೂರು: ಗಾಂಜಾ ನಶೆಯಲ್ಲಿ ತೇಲುತ್ತಿದ್ದ ಮತ್ತೆ ಇಬ್ಬರು ವೈದ್ಯರು ಹಾಗೂ 7 ಮೆಡಿಕಲ್ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 9 ಜನರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕಡಲನಗರಿ ಮಂಗಳೂರಿನಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳೇ ನಶೆಯ ಲೋಕದಲ್ಲಿ ತೇಲಾಡುತ್ತಿದ್ದು, ಮಾದಕವಸ್ತು ಸೇವನೆ ಹಾಗೂ ಮಾರಾಟ ಜಾಲದ ವಿರುದ್ಧ ಸಮರ ಮುಂದುವರೆಸಿರುವ ಪೊಲೀಸರು ವೈದರು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಇಂದು 9 ಜನರನ್ನು ಬಂಧಿಸಿದ್ದಾರೆ.
ಶ್ರೀನಿವಾಸ್ ಆಸ್ಪತ್ರೆಯ ವೈದ್ಯ ಸಿದ್ಧಾರ್ಥ ಪವಸ್ಕರ್ ಹಾಗೂ ದುರ್ಗಾ ಸಂಜೀವಿನಿ ಆಸ್ಪತ್ರೆಯ ವೈದ್ಯ ಸುಧೀಂದ್ರ ಬಂಧಿತ ವೈದ್ಯರು. ಇದೇ ವೇಳೆ ಕೆ ಎಂ ಸಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಉತ್ತರ ಪ್ರದೇಶ ಮೂಲದ ಡಾ. ವಿದುಶ್ ಕುಮಾರ್, ಡಾ.ಇಶ್ ಮಿದ್ದ, ಕೇರಳದ ಡಾ. ಸೂರ್ಯಜಿತ್ ದೇವ್, ಡಾ. ಆಯೇಷಾ ಮೊಹಮ್ಮದ್, ತೆಲಂಗಾಣದ ಡಾ. ಪ್ರಣಯ್ ನಟರಾಜ್, ಡಾ. ಚೈತನ್ಯಾ ಹಾಗೂ ದೆಹಲಿ ಮೂಲದ ಶರಣ್ಯಾ ಬಂಧಿತ ಮೆಡಿಕಲ್ ವಿದ್ಯಾರ್ಥಿಗಳು. ಈ ಮೂಲಕ ಗಾಂಜಾ ಕೇಸ್ ನಲ್ಲಿ ಈವರೆಗೆ ಬಂಧಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.