alex Certify ಕೋಲಾರದಿಂದಲೇ ಸಿದ್ದು ಸ್ಪರ್ಧೆ; ವಾಸ್ತವ್ಯಕ್ಕಾಗಿ ಆಪ್ತರಿಂದ ವಾಸ್ತು ಪ್ರಕಾರದ ಮನೆ ಹುಡುಕಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಲಾರದಿಂದಲೇ ಸಿದ್ದು ಸ್ಪರ್ಧೆ; ವಾಸ್ತವ್ಯಕ್ಕಾಗಿ ಆಪ್ತರಿಂದ ವಾಸ್ತು ಪ್ರಕಾರದ ಮನೆ ಹುಡುಕಾಟ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಸ್ವತಃ ಅವರೇ ಈಗಾಗಲೇ ಘೋಷಣೆ ಮಾಡಿದ್ದು, ಒಂದು ಕ್ಷೇತ್ರದಿಂದ ಮಾತ್ರ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಚಾಮುಂಡೇಶ್ವರಿಯಲ್ಲಿ ಪರಾಭವಗೊಂಡು ಬಾದಾಮಿಯಲ್ಲಿ ವಿಜಯ ಸಾಧಿಸಿದ್ದರು.

ಆದರೆ ಈ ಬಾರಿ ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಮತ ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ದುಕೊಂಡಿದ್ದು, ಇದಕ್ಕೆ ಕೋಲಾರವೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಅವರ ಆಪ್ತರು ಅವರಿಗಾಗಿ ಮನೆಯೊಂದರ ಹುಡುಕಾಟ ನಡೆಸಿದ್ದು ವಾಸ್ತುವಿಗೆ ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಚೆನ್ನೈ – ಹೆದ್ದಾರಿ ಸಮೀಪದಲ್ಲಿರುವ ಮನೆಗಾಗಿ ಹುಡುಕಾಟ ನಡೆಸಿದ್ದು, ಜೊತೆಗೆ ಗಣ್ಯರು ಸಿದ್ದರಾಮಯ್ಯನವರ ಭೇಟಿಗೆ ಬಂದ ಸಂದರ್ಭದಲ್ಲಿ ವಾಹನಗಳ ನಿಲುಗಡೆಗೂ ಸಾಕಷ್ಟು ಸ್ಥಳಾವಕಾಶವಿರುವ ಮನೆಯನ್ನು ಹುಡುಕಲಾಗುತ್ತಿದೆ.

ಮೂಲಗಳ ಪ್ರಕಾರ ಈ ತಿಂಗಳ ಅಂತ್ಯಕ್ಕೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಸಿದ್ದರಾಮಯ್ಯನವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಕುಟುಂಬ ಸದಸ್ಯರ ಜೊತೆ ಮನೆಯ ಗೃಹಪ್ರವೇಶ ಹಾಗೂ ಪೂಜೆ ನೆರವೇರಿಸಲಿದ್ದಾರೆ ಎನ್ನಲಾಗುತ್ತಿದ್ದು, ಅಷ್ಟರೊಳಗಾಗಿ ಸೂಕ್ತ ಮನೆಯ ಹುಡುಕಾಟ ನಡೆಯುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...