ಯಾದಗಿರಿ: ದೇಶದ ಎರಡು ದೊಡ್ಡ ಬಂದರು ನಗರಿಗಳ ನಡುವೆ ಸಂಪರ್ಕ ಮುಂದಿನ ದಿನಗಳಲ್ಲಿ ಸುಗಮವಾಗಲಿದೆ. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಲಿವೆ. ಪ್ರವಾಸೋಧ್ಯಮಕ್ಕೆ ಹೊಸ ಒತ್ತು ಸಿಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮೂಲಸೌಕರ್ಯ ವಿಚಾರದಲ್ಲಿ ಡಬಲ್ ಇಂಜಿನ್ ಸರ್ಕಾರದ ಪರಿಶ್ರಮದಿಂದಾಗಿ ಕರ್ನಾಟಕಕ್ಕೆ ಹೂಡಿಕೆಗಳು ಹರಿದು ಬರುತ್ತಿವೆ. ಉತ್ತರ ಕರ್ನಾಟಕಕ್ಕೂ ಈ ಲಾಭ ಸಿಕ್ಕೆ ಸಿಗುತ್ತದೆ. ದೇಶದ ಆರ್ಥಿಕತೆಗೆ ಉತ್ತರ ಕರ್ನಾಟಕದ ಕೊಡುಗೆ ದೊಡ್ದದು ಎಂದು ಹೇಳಿದರು. 2023ನೇ ವರ್ಷವನ್ನು ಕಿರುಧಾನ್ಯಗಳ ವರ್ಷ ಎಂದು ಘೋಷಿಸಿದ್ದೇವೆ. ರಾಗಿ ಸೇರಿದಂತೆ ಇನ್ನಿತರ ಕಿರಿಧಾನ್ಯ ಬೆಳೆಯುವ ಕರ್ನಾಟಕ ಈ ನಿಟ್ಟಿನಲ್ಲಿ ಮಹತ್ವ ಪಡೆದಿದೆ. ಯಾದಗಿರಿ ತೊಗರಿಯ ಕಣಜ. ಹಾಗಾಗಿ ಕಳೆದ ಕೆಲ ವರ್ಷಗಳಿಂದ ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ದೇಶದ ಆರ್ಥಿಕತೆ ದೃಷ್ಟಿಯಿಂದಲೂ ಇದು ಮುಖ್ಯ ಬೆಳೆಯಾಗಿದೆ. ತೊಗರಿ ಬೆಳೆಗಾರರಿಗಾಗಿ 7000 ಕೋಟಿ ಪ್ರೋತ್ಸಾಹ ಧನ ನೀಡಿದ್ದೇವೆ ಎಂದರು.
ಹೊಸ ಶಿಕ್ಷಣ ನೀತಿ ಜಾರಿ ಮಾಡಿದ್ದೇವೆ. ಕರ್ನಾಟಕ ಸರ್ಕಾರ ವಿದ್ಯಾನಿಧಿ ಯೋಜನೆ ಜಾರಿ ಮಾಡಿತು. ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಗಳಲ್ಲಿ ಹಲವು ಹೊಸ ಯೋಜನೆ ಪ್ರಕಟಿಸಿದರೆ ಇತ್ತ ಕರ್ನಾಟಕ ಸರ್ಕಾರ ಆ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಸಣ್ಣ ರೈತರಿಗೂ ಅನುಕೂಲವಾಗುವಂತೆ ಮಾಡಿದ್ದೇವೆ. ಡ್ರೋಣ್, ನ್ಯಾನೋ, ಯೂರಿಯಾದಂತಹ ಆಧುನಿಕರಣಕ್ಕೆ ನೆರವಾಗುತ್ತಿದ್ದೇವೆ. ಇದರೊಂದಿಗೆ ಸಹಜ ಸಾವಯವ ಕೃಷಿಗೂ ಆದ್ಯತೆ ಕೊಡುತ್ತಿದ್ದೇವೆ. ಡಬಲ್ ಎಂಜಿನ್ ಸರ್ಕಾರದಿಂದ ಜನರಿಗೆ ಡಬಲ್ ಲಾಭವಾಗುತ್ತಿದೆ ಎಂದರು.