alex Certify ತರಗತಿಯಲ್ಲಿ ಸಖತ್ ಫನ್ನಿಯಾಗಿ ಹಾಡು ಹೇಳಿದ ಬಾಲಕ: ವಿಡಿಯೋ ಶೇರ್ ಮಾಡಿಕೊಂಡ ನಾಗಾಲ್ಯಾಂಡ್ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತರಗತಿಯಲ್ಲಿ ಸಖತ್ ಫನ್ನಿಯಾಗಿ ಹಾಡು ಹೇಳಿದ ಬಾಲಕ: ವಿಡಿಯೋ ಶೇರ್ ಮಾಡಿಕೊಂಡ ನಾಗಾಲ್ಯಾಂಡ್ ಸಚಿವ

ಯಾವತ್ತಾದ್ರೂ ಮಕ್ಕಳೊಂದಿಗೆ ಸಮಯ ಕಳೆದಿದ್ದಿರಾ? ಇಲ್ಲಾ ಅಂದ್ರೆ, ಇನ್ನು ಮುಂದೆ ಆ ಪ್ರಯತ್ನ ಮಾಡಿ. ಅವರ ಮುಗ್ಧತೆ ನಿಮ್ಮಲ್ಲಿರೋ ಎಷ್ಟೋ ಟೆನ್ಷನ್ ದೂರ ಮಾಡಿ ಬಿಡುತ್ತೆ.

ಅಷ್ಟೇ ಅಲ್ಲ ಆಟ ಆಟದಲ್ಲೇ ಅವರು ನಮಗೆ ಜೀವನದ ಕುರಿತ ಒಂದು ಪಾಠವನ್ನ ಕೂಡಾ ಹೇಳಿರ್ತಾರೆ. ಇತ್ತೀಚೆಗೆ ನಾಗಾಲ್ಯಾಂಡ್ ಸಚಿವರಾದ ತೆಮ್ಜೆನ್ ಇಮ್ನಾ ಅಲೋಂಗ್ ಅವರು ಇದೇ ಅರ್ಥ ಕೊಡುವ ವಿಡಿಯೋ ಒಂದನ್ನ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋ ನೋಡ್ತಿದ್ರೆ, ನಿಮ್ಮ ಮುಖದಲ್ಲಿ ಒಂದು ಪುಟ್ಟ ಮಂದಹಾಸ ನಿಮಗೇನೆ ಗೊತ್ತಿಲ್ಲದಂತೆ ಮೂಡಿ ಬಿಡುತ್ತೆ. ಆ ವಿಡಿಯೋ ಈಗ ವೈರಲ್ ಆಗಿದೆ.

ತರಗತಿಯಲ್ಲಿ ಓರ್ವ ವಿದ್ಯಾರ್ಥಿ, ಒಂದು ಹಾಡನ್ನ ಹೇಳುತ್ತಿರೋದನ್ನ ಈ ವಿಡಿಯೋದಲ್ಲಿ ಗಮನಿಸಬಹುದು. ಆತ ಹಾಡುವ ಶೈಲಿ ನೋಡ್ತಿದ್ರೆ ನಗು ಬಂದೇ ಬರುತ್ತೆ. ಅಲ್ಲೇ ಅಕ್ಕ-ಪಕ್ಕದಲ್ಲಿರುವ ಆತನ ಸಹಪಾಠಿಗಳು, ಆತನ ಹಾಡು ಕೇಳಿ ನಗ್ತಾರೆ. ಆದರೂ ಆತ ಹಾಡು ಹೇಳುವುದನ್ನ ನಿಲ್ಲಿಸುವುದಿಲ್ಲ. ಬದಲಾಗಿ ಇನ್ನಷ್ಟು ಜೋಶ್‌ನಿಂದ ಹಾಡನ್ನ ಪೂರ್ತಿಯಾಗಿ ಹಾಡ್ತಾನೆ. ಈ ವಿಡಿಯೋ ಪೋಸ್ಟ್ ಮಾಡಿರುವ ನಾಗಾಲ್ಯಾಂಡ್ ಸಚಿವರು ಕ್ಯಾಪ್ಷನ್‌ನಲ್ಲಿ “ಜೀವನದಲ್ಲಿ ಇಷ್ಟು ಆತ್ಮವಿಶ್ವಾಸ ಇದ್ದರೆ ಸಾಕು, ಬದುಕೋದಕ್ಕೆ ಜನರ ದೃಷ್ಟಿ ಬೇಕಾಗಿಲ್ಲ, ನಮ್ಮ ದೂರದೃಷ್ಟಿ ಇರಬೇಕು“ ಎಂದು ಬರೆದಿದ್ದಾರೆ.

ಮಗುವಿಗೂ ಗೊತ್ತು ತಾನು ಅದ್ಭುತವಾಗಿ ಹಾಡುತ್ತಿಲ್ಲ ಎಂದು, ಆದರೆ ಆತ ಅದೇ ಹಾಡನ್ನ ಫನ್ನಿಯಾಗಿ ಹಾಡಿದ್ದ. ಮತ್ತು ಹೃದಯದಿಂದ ಹಾಡಿದ್ದ. ಯಾರು ಏನಾದರೂ ಅಂದ್ಕೊಳ್ಳಿ ಅಂತ ಕ್ಯಾರೇ ಮಾಡದೇ ಎಲ್ಲರ ಮುಂದೆ ಹಾಡಿ ತೋರಿಸಿದ್ದ. ಇದನ್ನೇ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿರುವುದು ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಡಿಯೋವನ್ನ ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅನೇಕರು ಕಾಮೆಂಟ್ ಬಾಕ್ಸ್‌ನಲ್ಲಿ “ ಈ ಮಗುವಿನಿಂದ ಕಲಿಯಬೇಕಾಗಿರೋದು ತುಂಬಾ ಇದೆ“ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಹಾಡಿನ ಅರ್ಥ ತುಂಬಾ ಜನರಿಗೆ ಗೊತ್ತಿಲ್ಲ. ಅದಕ್ಕೆ ಒಬ್ಬರು “ಅತ್ತೆಯ ಮನೆಗೆ ಹೋದ ಅಳಿಯ ಕೋಳಿ ಸಾರು ತಿಂದು, ಆಕೆಯ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕು‘‘ ಅಂತ ಒಬ್ಬರು ಈ ಹಾಡಿನ ಅರ್ಥ ಏನು ಅಂತ ಹೇಳಿದ್ದಾರೆ.

— Temjen Imna Along(Modi Ka Parivar) (@AlongImna) January 18, 2023

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...