ನ್ಯಾಯಾಲಯದ ಆದೇಶವಿದ್ದರೂ ರೈತನಿಗೆ ನೀಡದ ಪರಿಹಾರ; ಸರ್ಕಾರಿ ಕಛೇರಿ ಪೀಠೋಪಕರಣ ಜಪ್ತಿ

ಶಿವಮೊಗ್ಗ: ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ನೀಡದೆ ಸತಾಯಿಸುತ್ತಿದ್ದ ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ಕಾರ್ಯಾಲಯದ ಪೀಠೋಪಕರಣ ಹಾಗೂ ಕಂಪ್ಯೂಟರ್‌ಗಳನ್ನು ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಇಂದು ಜಪ್ತಿ ಮಾಡಲಾಯಿತು.

ಗಾಡಿಕೊಪ್ಪದ ವೆಂಕಟೇಶ್ ಎಂಬುವರ ಅನುಪಿನಕಟ್ಟೆ ಸರ್ವೆ ನಂಬರ್ 75ರಲ್ಲಿನ 5.19 ಎಕರೆ ಜಮೀನು ತುಂಗಾ ಮೇಲ್ದಂಡೆ ಯೋಜನೆಗಾಗಿ 1997ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅಂದು ಎಕರೆಗೆ 3 ಲಕ್ಷದಂತೆ ಪರಿಹಾರ ನೀಡಲಾಗಿದ್ದು, ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

ಪರಿಹಾರದ ಮೊತ್ತ ಹೆಚ್ಚಿಸಿದ್ದ ನ್ಯಾಯಾಲಯ 2.45 ಕೋಟಿ ರೂ. ಪರಿಹಾರ ನೀಡುವಂತೆ ಅದೇಶಿಸಿತ್ತು. ಆದರೆ ಇದುವರೆಗೂ ಪರಿಹಾರವನ್ನು ನೀಡಿರಲಿಲ್ಲ. ಹೀಗಾಗಿ ಜಮೀನು ಮಾಲೀಕ ವೆಂಕಟೇಶ್ ಪುನಃ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನು ಪುಸ್ಕರಿಸಿದ ನ್ಯಾಯಾಲಯ 19 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು.

ಆಗಲೂ ಪರಿಹಾರ ನೀಡದಿದ್ದರಿಂದ ನ್ಯಾಯಾಲಯ ಕಚೇರಿಯ ಪೀಠೋಪಕರಣ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡುವಂತೆಯೂ ಆದೇಶಿಸಿತ್ತು.

ಇದರಿಂದಾಗಿ ನ್ಯಾಯಲಯದ ಅಮೀನರ ನೆರವಿನೊಂದಿಗೆ 5 ಕಂಪ್ಯೂಟರ್, 5 ಖುರ್ಚಿ, 2 ಟೇಬಲ್ ಸೇರಿದಂತೆ ಸುಮಾರು 1ಲಕ್ಷ ರೂ. ವೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read