ಜೋಶ್ ಸೃಷ್ಟಿಕರ್ತ ನಾಗಾಭರಣ ಗುಬ್ಬಿ ಅವರ ಕಥೆ ಸ್ಫೂರ್ತಿದಾಯಕವಾಗಿದೆ. ನಾಗಾಭರಣ ಗುಬ್ಬಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಕಠಿಣ ಪರಿಶ್ರಮ ಮತ್ತು ಅದೃಷ್ಟದ ಮೂಲಕವೇ ಸಾಧನೆಯ ಹಾದಿ ತುಳಿದವರು. ಸದ್ಯ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಪ್ರಯತ್ನಕ್ಕೆ ಕೈಹಾಕುವ ಮೂಲಕ ಇತರರಿಗೂ ಮಾದರಿಯಾಗಲು ಹೊರಟಿದ್ದಾರೆ ನಾಗಾಭರಣ. ಜೋಶ್ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡ್ತಿದ್ದಾರೆ ಇವರು. ಜೋಶ್ ವೇದಿಕೆಯನ್ನೀಗ ಸಾಕಷ್ಟು ಮಂದಿ ಫಾಲೋ ಮಾಡುತ್ತಿದ್ದಾರೆ. ಇಷ್ಟೊಂದು ಬೆಂಬಲ ಸಿಕ್ಕಿರೋದು ನಾಗಾಭರಣ ಅವರಿಗೂ ಅಪಾರ ಖುಷಿ ಕೊಟ್ಟಿದೆ.
ಈ ಬಂಧ ದೀರ್ಘಾವಧಿಯವರೆಗೂ ಇರಬೇಕು ಅನ್ನೋದೇ ಅವರ ಮಹದಾಸೆ. ಕಿರು ವೀಡಿಯೊ ಪ್ಲಾಟ್‌ಫಾರ್ಮ್ ಜೋಶ್, ತನ್ನ ಸೃಷ್ಟಿಕರ್ತರ ಯಶಸ್ಸಿನ ಹಾದಿಯನ್ನು ಜಗತ್ತಿಗೆ ತೆರೆದಿಡುವ ಮೂಲಕ ಆಕಾಂಕ್ಷಿಗಳಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಪ್ರೇರಣೆಯಾಗುವುದರಲ್ಲಿ ಅನುಮಾನವೇ ಇಲ್ಲ. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಯಶಸ್ಸಿನ ಮೂಲಮಂತ್ರ ಎನ್ನುತ್ತಾರೆ 23ರ ಹರೆಯದ ನಾಗಾಭರಣ ಗುಬ್ಬಿ.
ನಾಗಾಭರಣ ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದವರು. ಸಿದ್ದಗಂಗಾ ಪಾಲಿಟೆಕ್ನಿಕ್‌ನ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ್ದಾರೆ. ಸದ್ಯ ಡಾ. ಅಂಬೇಡ್ಕರ್ ತಾಂತ್ರಿಕ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ. ನಾಗಾಭರಣ ಅವರಿಗೆ ನಟನೆ, ಕ್ರೀಡೆ, ಎನ್‌ಸಿಸಿ, ಯೋಗ, ಈಜು, ವಿಜ್ಞಾನ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಆಸಕ್ತಿಯಿದೆ. ಮೊದಲಿನಿಂದ್ಲೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನಾಗಾಭರಣ, ಡಿಪ್ಲೋಮಾ ಸಮಯದಲ್ಲಿ ಸಿನೆಮಾದತ್ತ ಒಲವು ತೋರಿದರು. ಸಣ್ಣ ಪರದೆಯ ಮೇಲೆ ಆರ್ಕೆಸ್ಟ್ರಾ ತಂತ್ರಜ್ಞರಾಗಿ, ಸಹಾಯಕ ನಿರ್ದೇಶಕರಾಗಿ ತಮ್ಮ ಮೊದಲ ಹೆಜ್ಜೆಗಳನ್ನು ಇಟ್ಟರು.
ಇಂಜಿನಿಯರಿಂಗ್ ಓದಲು ಬೆಂಗಳೂರಿಗೆ ಬಂದ ನಂತರ ಯೂಟ್ಯೂಬ್ ಚಾನೆಲ್ ಮೂಲಕ ವಿಭಿನ್ನ ಸಿನಿಮಾಗಳನ್ನು ಪ್ರಚಾರ ಮಾಡಲು ನಿರ್ಧರಿಸಿದ್ರು. ಸುಮಾರು 30ಕ್ಕೂ ಹೆಚ್ಚು ಬಿಗ್ ಬ್ಯಾನರ್ ಸಿನೆಮಾಗಳ ಬಗ್ಗೆ ನಾಗಾಭರಣ ಪ್ರಚಾರ ಮಾಡಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿದ ನಿರ್ದೇಶಕ ಮನು ಕಲ್ಯಾಡಿ, ತಮ್ಮ ಚೊಚ್ಚಲ ಚಿತ್ರ ‘ಮನೋರಂಜನ್’ ಮೂಲಕ ಪ್ರಚಾರ ಸಂಯೋಜಕರಾಗಲು ಅವಕಾಶ ನೀಡಿದರು. ಪ್ರೇಕ್ಷಕರನ್ನು ತಲುಪಬೇಕೆಂಬ ಉದ್ದೇಶದಿಂದ ನಾಗಾಭರಣ, ಜೋಶ್ ಎಂಬ ಕಿರು ವಿಡಿಯೋ ಪ್ಲಾಟ್‌ಫಾರ್ಮ್ ಸೇರಿದ್ದಾರೆ. ಜೋಶ್‌ನಲ್ಲಿ ಅವರಿಗೆ 2.1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ನಾಗಾಭರಣ ಗುಬ್ಬಿ ಅವರು ಅಭಿಷೇಕ್ ಶೆಟ್ಟಿ ನಿರ್ದೇಶನದ ʼಗಜಾನನ ಮತ್ತು ಗ್ಯಾಂಗ್ʼಗೆ ಪ್ರಚಾರ ಸಂಯೋಜಕರಾಗಿಯೂ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ನಾಗಾಭರಣ ಇಂಜಿನಿಯರಿಂಗ್ ಪೂರ್ಣಗೊಳಿಸುವ ಉದ್ದೇಶದಿಂದ ಇತರ ಕೆಲಸಗಳನ್ನು ಮುಂದೂಡಿದ್ದಾರೆ. ಆದರೆ ಭವಿಷ್ಯದಲ್ಲಿ ಇನ್ನಷ್ಟು ಸಿನಿಮಾಗಳನ್ನು ಪ್ರಚಾರ ಮಾಡುವ ನಿರೀಕ್ಷೆಯಲ್ಲಿದ್ದಾರೆ. “ನಾನು ನನ್ನ ಕೆಲಸವನ್ನು ಇತರರಿಗಿಂತ ಭಿನ್ನವಾಗಿಸಲು ಪ್ರಯತ್ನಿಸುತ್ತೇನೆ ಮತ್ತು ಜನರು ಮತ್ತು ಚಿತ್ರತಂಡದವರು ಇಷ್ಟಪಡುವ ಜನರನ್ನು ತಲುಪುತ್ತೇನೆ. ಡಾಲಿ ಧನಂಜಯ್, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಮುಂತಾದ ಸೆಲೆಬ್ರಿಟಿಗಳು ನನ್ನ ಪ್ರಚಾರದ ತುಣುಕನ್ನು ಮೆಚ್ಚಿದ್ದಾರೆ”ಎಂದು ನಾಗಾಭರಣ ಮನಬಿಚ್ಚಿ ಮಾತನಾಡಿದ್ದಾರೆ.
ಚಿತ್ರಗಳ ಪ್ರಚಾರದ ಜೊತೆಗೆ, ನಟನೆ ಮತ್ತು ನಿರ್ದೇಶನದಲ್ಲೂ ತೊಡಗಿಸಿಕೊಳ್ಳಬೇಕೆಂಬುದು ನಾಗಾಭರಣ ಅವರ ಬಯಕೆ. ಅವರ ಪರಿಶ್ರಮ, ಬದ್ಧತೆ ಮತ್ತು ಸಿನೆಮಾ ಮೇಲಿನ ಪ್ರೀತಿಯನ್ನು ಮೆಚ್ಚಿಕೊಳ್ಳಲೇಬೇಕು. ಕನ್ನಡ ಸಿನೆಮಾ ಇಂಡಸ್ಟ್ರಿ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿಗಾಗಿ ನೀವು ಕೂಡ ಜೋಶ್‌ನಲ್ಲಿ ನಾಗಾಭರಣ ಅವರನ್ನು ಫಾಲೋ ಮಾಡಬಹುದು.