ದಳಪತಿ ವಿಜಯ್ ಅಭಿನಯದ ʼವಾರಿಸುʼ ಚಿತ್ರವು ಭಾರೀ ಹಿಟ್ ಆಗುತ್ತಿದೆ. ಕಳೆದ ವಾರ ಬಿಡುಗಡೆಯಾದ ಈ ಚಿತ್ರವು ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳಿಂದ ಸಾಕಷ್ಟು ಪ್ರೀತಿಯನ್ನು ಗಳಿಸುತ್ತಿದೆ. ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದು, ವಂಶಿ ಪೈಡಿಪಲ್ಲಿ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈನರ್ ಆಗಿದೆ.
ಹಾಡುಗಳು, ವಿಶೇಷವಾಗಿ ಜನರನ್ನು ಕುಣಿಯುವಂತೆ ಮಾಡುತ್ತಿವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ಥಿಯೇಟರ್‌ನಲ್ಲಿ ಹಾಡನ್ನು ನೋಡುತ್ತಿರುವಾಗ ಈ ವಯಸ್ಸಾದ ಮಹಿಳೆಯೂ ಹಾಡಿಗೆ ಹೆಜ್ಜೆ ಹಾಕಿದ್ದು, ಅದೀಗ ನೆಟ್ಟಿಗರನ್ನು ನಕ್ಕು ನಗಿಸುತ್ತಿದೆ.
ವಾರಿಸು ಚಿತ್ರದ ರಂಜಿತಾಮೆ ಹಾಡಿಗೆ ವಯಸ್ಸಾದ ಮಹಿಳೆಯೊಬ್ಬರು ಕುಣಿದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯು ಹೊಸದಾಗಿ ಬಿಡುಗಡೆಯಾದ ಚಲನಚಿತ್ರವನ್ನು ವೀಕ್ಷಿಸಲು ಥಿಯೇಟರ್‌ಗೆ ಹೋಗಿರುವಂತೆ ತೋರುತ್ತಿದೆ ಮತ್ತು ಈ ಹಾಡು ತೆರೆಯ ಮೇಲೆ ಪ್ಲೇ ಮಾಡಿದಾಗ, ಮಹಿಳೆ ಡಾನ್ಸ್ ಮಾಡಿದ್ದು, ಉಳಿದವರೂ ಅದಕ್ಕೆ ಸಾಥ್ ನೀಡಿದ್ದಾರೆ.
https://twitter.com/zamnsk/status/1614493311900987392?ref_src=twsrc%5Etfw%7Ctwcamp%5Etweetembed%7Ctwterm%5E1614493311900987392%7Ctwgr%5E368c655f19aa6572eb6b68f6dd48722eb6f89448%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Felderly-woman-in-theatre-dances-to-vijay-and-rashmika-mandannas-ranjithame-internet-loves-viral-video-2322070-2023-01-16
https://twitter.com/zamnsk/status/1614493317936599040?ref_src=twsrc%5Etfw%7Ctwcamp%5Etweetembed%7Ctwterm%5E1614493317936599040%7Ctwgr%5E368c655f19aa6572eb6b68f6dd48722eb6f89448%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Felderly-woman-in-theatre-dances-to-vijay-and-rashmika-mandannas-ranjithame-internet-loves-viral-video-2322070-2023-01-16