ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಖ್ಯಾತಿ ಹೊರ ದೇಶಗಳಿಗೂ ಹಬ್ಬಿದೆ. ಹಿಂದೊಮ್ಮೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು ಮುಖೇಶ್. ಸಿರಿವಂತಿಕೆಗೆ ತಕ್ಕಂತೆ ಅವರ ಬಳಿ ಐಷಾರಾಮಿ ಕಾರುಗಳು ಇವೆ. ಮುಖೇಶ್ ಅಂಬಾನಿ ಅವರ ಬಳಿಯಿರುವ ಅತ್ಯಂತ ದುಬಾರಿ ಕಾರುಗಳು ಯಾವುವು ಅನ್ನೋದನ್ನು ನೋಡೋಣ.
Rolls Royce Cullinan
ಮುಖೇಶ್ ಅಂಬಾನಿ ಅವರ ಬಳಿ ರೋಲ್ಸ್ ರಾಯ್ಸ್ ಕಲ್ಲಿನನ್ ಕಾರು ಇದೆ. ಇದರ ಬೆಲೆ ಸುಮಾರು 13 ಕೋಟಿ ರೂಪಾಯಿ. ಕಳೆದ ವರ್ಷದ ಆರಂಭದಲ್ಲಿ ಅಂಬಾನಿ ಈ ಐಷಾರಾಮಿ ಕಾರನ್ನು ಖರೀದಿಸಿದರು.
Rolls Royce Phantom
ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್ಹೆಡ್ ಕೂಪೆ ಕಾರಿನ ಒಡೆಯ. ಇದರ ಬೆಲೆಯೂ ಸುಮಾರು 13 ಕೋಟಿ ರೂಪಾಯಿ. ಈ ಕಾರಿನ ಲುಕ್, ಫೀಚರ್ಗಳು, ಸೌಕರ್ಯಗಳೆಲ್ಲ ಅದ್ಭುತವಾಗಿವೆ.
Mercedes Maybach Benz S660 Guard
ಮುಖೇಶ್ ಅಂಬಾನಿ ದುಬಾರಿ ಮತ್ತು ಐಷಾರಾಮಿ ಕಾರುಗಳನ್ನೇ ಇಷ್ಟಪಡುತ್ತಾರೆ. ಅವರ ಗ್ಯಾರೇಜ್ನಲ್ಲಿ ಹಲವು ಶಕ್ತಿಶಾಲಿ ಮತ್ತು ಅಲ್ಟ್ರಾ ಐಷಾರಾಮಿ ಮರ್ಸಿಡಿಸ್ ಕಾರುಗಳಿವೆ. Mercedes Maybach Benz S660 ಗಾರ್ಡ್ ಕೂಡ ಅವರ ಬಳಿಯಿದೆ. ಇದು 10 ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ್ದಾಗಿದೆ.
BMW 760 Li Security (Armoured)
ಮುಖೇಶ್ ಅಂಬಾನಿ ಅವರ ಬಳಿ ಬುಲೆಟ್ ಪ್ರೂಫ್ ಕಾರುಗಳಿವೆ. ಅವರು BMW 760Li ಸೆಕ್ಯುರಿಟಿ (ಆರ್ಮರ್ಡ್) ಅನ್ನು ಹೊಂದಿದ್ದಾರೆ. ಇದರ ಬೆಲೆ ಅಂದಾಜು 8.50 ಕೋಟಿ ರೂಪಾಯಿ. ಈ ಕಾರು ಬುಲೆಟ್ ಪ್ರೂಫ್ ಆಗಿದ್ದು, ಭದ್ರತೆ ದೃಷ್ಟಿಯಿಂದಲೂ ಉತ್ತಮವಾಗಿದೆ.
Ferrari SF90 Stradale
ಫೆರಾರಿ SF90 ಸ್ಟ್ರಾಡೇಲ್ ಕಾರು ಕೂಡ ಅಂಬಾನಿ ಅವರ ಬಳಿಯಿದೆ. ಇದು ಹೈಬ್ರಿಡ್ ಸ್ಪೋರ್ಟ್ಸ್ ಕಾರು. ಇದನ್ನು ಮೊದಲು 2019 ರಲ್ಲಿ ಪರಿಚಯಿಸಲಾಯಿತು. ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಂದಿರುವ ಮೊದಲ ಫೆರಾರಿ ಕಾರು ಇದಾಗಿದೆ. ಇದರ ಬೆಲೆ ಸುಮಾರು 7.50 ಕೋಟಿ ರೂಪಾಯಿ.