ಟಿಎಂಸಿ ಕಾರ್ಯಕರ್ತರು ಕಪಾಳಕ್ಕೆ ಹೊಡೆದರೆ ತಿರುಗಿಸಿ ನಾಲ್ಕೈದು ಬಿಡಿ ಎಂದ ಬಿಜೆಪಿ ಸಂಸದೆ…!

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ‘ದೀದಿ ಸುರಕ್ಷಾ ಕವಚ’ ಎಂಬ ಸರ್ಕಾರಿ ಸಭೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಸಾಗರ್ ಬಿಸ್ವಾಸ್ ಎಂಬವರು ರಸ್ತೆ ಸಮಸ್ಯೆ ಕುರಿತು ಪ್ರಶ್ನಿಸಿದ್ದರು.

ಆಗ ಆತನಿಗೆ ಟಿಎಂಸಿ ಕಾರ್ಯಕರ್ತ ಕಪಾಳ ಮೋಕ್ಷ ಮಾಡಿದ್ದ. ಇದಕ್ಕೆ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ನೀಡಿರುವ ಹೇಳಿಕೆ ಈಗ ಪಶ್ಚಿಮ ಬಂಗಾಳದಲ್ಲಿ ವಾದ – ವಿವಾದಕ್ಕೆ ಕಾರಣವಾಗಿದೆ.

ಭಾನುವಾರದಂದು ಮಾತನಾಡಿದ್ದ ಲಾಕೆಟ್ ಚಟರ್ಜಿ, ಒಬ್ಬ ಟಿಎಂಸಿ ಕಾರ್ಯಕರ್ತ ನಿಮಗೆ ಹೊಡೆದ ಎಂಬ ಕಾರಣಕ್ಕೆ ಕಣ್ಣೀರು ಹಾಕಬೇಡಿ. ಅದರ ಬದಲಿಗೆ ಆತನನ್ನು ಕಂಬಕ್ಕೆ ಕಟ್ಟಿ ನಾಲ್ಕೈದು ಸಲ ಕಪಾಳಕ್ಕೆ ಬಾರಿಸಿ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read