alex Certify ಮಹಿಳೆಯರು ಚಿನ್ನದ ಕಾಲುಂಗುರ, ಕಾಲ್ಗೆಜ್ಜೆಯನ್ನೇಕೆ ಧರಿಸುವುದಿಲ್ಲ ? ಇದಕ್ಕೂ ಇದೆ ವೈಜ್ಞಾನಿಕ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರು ಚಿನ್ನದ ಕಾಲುಂಗುರ, ಕಾಲ್ಗೆಜ್ಜೆಯನ್ನೇಕೆ ಧರಿಸುವುದಿಲ್ಲ ? ಇದಕ್ಕೂ ಇದೆ ವೈಜ್ಞಾನಿಕ ಕಾರಣ

ಮಹಿಳೆಯರಲ್ಲಿ ಆಭರಣಗಳ ಬಗ್ಗೆ ಉತ್ಸಾಹ ತುಸು ಹೆಚ್ಚಾಗಿಯೇ ಇರುತ್ತದೆ. ಚಿನ್ನ, ಬೆಳ್ಳಿ, ಪ್ಲಾಟಿನಂ, ವಜ್ರ ಹೀಗೆ ಜಗತ್ತಿನಲ್ಲಿ ಅನೇಕ ಬಗೆಯ ದುಬಾರಿ ಆಭರಣಗಳು ಲಭ್ಯವಿವೆ. ಮಹಿಳೆಯರ ಆಭರಣಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಚಾರವೊಂದಿದೆ. ಸಾಮಾನ್ಯವಾಗಿ ಮಹಿಳೆಯರು ಪಾದಗಳಲ್ಲಿ ಚಿನ್ನದ ಕಾಲುಂಗುರಗಳನ್ನು ಧರಿಸುವುದಿಲ್ಲ. ಚಿನ್ನದ ಕಾಲ್ಗೆಜ್ಜೆಯನ್ನೂ ಧರಿಸುವುದಿಲ್ಲ.ಇದಕ್ಕೆ ಧಾರ್ಮಿಕ ಮತ್ತು ವೈಜ್ಞಾನಿಕ ಎರಡೂ ಕಾರಣಗಳಿವೆ.

ಹಿಂದೂ ಧರ್ಮದಲ್ಲಿ ಮಹಿಳೆಯರ ಆಭರಣಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪ್ರತಿಯೊಂದು ಆಭರಣಕ್ಕೂ ತನ್ನದೇ ಆದ ಮಹತ್ವವಿದೆ. ವಿಷ್ಣುವಿಗೆ ಚಿನ್ನವು ತುಂಬಾ ಪ್ರಿಯವಾಗಿದ್ದು ಎಂದು ಹೇಳಲಾಗುತ್ತದೆ. ವಿಷ್ಣುವಿನ ಪತ್ನಿಯಾದ ಲಕ್ಷ್ಮಿದೇವಿಗೂ ಚಿನ್ನಕ್ಕೂ ಅವಿನಾಭಾವ ಸಂಬಂಧ. ಹಾಗಾಗಿಯೇ ಸೊಂಟದ ಕೆಳಗೆ ಯಾವುದೇ ಚಿನ್ನದ ಆಭರಣಗಳನ್ನು ಧರಿಸಬಾರದು ಎಂಬುದು ನಂಬಿಕೆ. ಸೊಂಟದ ಕೆಳಗೆ ಬಂಗಾರದ ಆಭರಣಗಳನ್ನು ಧರಿಸಿದ್ರೆ ವಿಷ್ಣು ಮತ್ತು ಲಕ್ಷ್ಮಿಗೆ ಅಪಮಾನ ಮಾಡಿದಂತೆ, ದೇವತೆಗಳು ನಮ್ಮ ಮೇಲೆ ಕೋಪಗೊಳ್ಳುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ.

ಚಿನ್ನದ ಆಭರಣಗಳು ನಮ್ಮ ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ. ಬೆಳ್ಳಿಯು ತಂಪು ನೀಡುತ್ತದೆ. ಹಾಗಾಗಿ ದೇಹದ ಕೆಳಭಾಗದಲ್ಲಿ ಬೆಳ್ಳಿಯನ್ನು ಧರಿಸುವುದು ಹೆಚ್ಚು ಪ್ರಯೋಜನಕಾರಿ, ಏಕೆಂದರೆ ಅದು ದೇಹದ ಉಷ್ಣತೆಯನ್ನು ಸ್ಥಿರವಾಗಿರಿಸುತ್ತದೆ. ಇದರಿಂದಾಗಿ ಅನೇಕ ರೋಗಗಳು ನಮ್ಮಿಂದ ದೂರವಿರುತ್ತವೆ. ಆದರೆ ನಾವು ಚಿನ್ನವನ್ನು ಧರಿಸಿದಾಗ ದೇಹದ ಉಷ್ಣತೆಯು ನಿಯಂತ್ರಣ ಕಳೆದುಕೊಳ್ಳುತ್ತದೆ ಮತ್ತು ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಈ ಕಾರಣಕ್ಕೆ ಚಿನ್ನದ ಕಾಲುಂಗುರ ಮತ್ತು ಕಾಲ್ಗೆಜ್ಜೆಯನ್ನು ಮಹಿಳೆಯರು ಧರಿಸುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...